×
Ad

ಅಂಬ್ಲಮೊಗರು ಶಾಲೆಗೆ ವಿದ್ಯಾರ್ಥಿಗಳಿಂದ ಬೀಗ

Update: 2016-08-01 20:43 IST

ಮಂಗಳೂರು, ಆ.1:ಶಿಕ್ಷಕರ ವರ್ಗಾವಣೆ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಅಂಬ್ಲಮೊಗರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕಾರ ನಡೆಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

    ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಮಾತನಾಡಿ ಅಂಬ್ಲಮೊಗರು ಫ್ರೌಢಶಾಲೆಗೆ ಫ್ರೌಢಶಾಲೆ ಮಂಜೂರಾದರೂ ಖಾಯಂ ಶಿಕ್ಷಕರ ನೇಮಕ ನಡೆದಿಲ್ಲ ಆದರೆ ಅ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ ಶಿಕ್ಷಕರ ವರ್ಗಾವಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರಾಗುವ ಕೆಲಸಕ್ಕೆ ಮುಂದಾಗಿದ್ದು ಈ ಹೋರಾಟವನ್ನು ಜಿಲ್ಲಾಧಿಕಾರಿ ಕಛೇರಿವರೆಗೆ ಕೊಂಡೊಯ್ಯಯಲಾಗುವುದು ಎಂದರು.

  ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬುಸಾಲಿ ಮಾತನಾಡಿ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ತರಗತಿಗೆ ಒಬ್ಬ ಶಿಕ್ಷಕರಿರಬೇಕು .ದೈಹಿಕ ಶಿಕ್ಷಕರು ಕಡ್ಡಾಯ ಇರಬೇಕೆಂದು ನಿಯಮವಿದ್ದರೂ ಸರ್ಕಾರ ಮಕ್ಕಳ ಹಕ್ಕನ್ನು ಕಸಿಯುವ ಕೆಲಸಕ್ಕೆ ಮುಂದಾಗಿದೆ ಎಂದರು.

 ವಿದ್ಯಾರ್ಥಿನಿ ಶಂಬ್ರೀನಾ ಮಾತನಾಡಿ ಸರ್ಕಾರ ಭವಿಷ್ಯದಲ್ಲಿ ಶಾಲೆಯ ಬಾಗಿಲನ್ನು ಖಾಯಂ ಆಗಿ ಮುಚ್ಚದಂತೆ ಹೋರಾಟ ನಡೆಸಿದ್ದು ತಮ್ಮ ಪೋಷಕರ ಜೊತೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆಯೂ ಧರಣಿ ನಡೆಸಲು ತಯಾರಿದ್ದೇವೆ ಎಂದರು.

   ಈ ಪ್ರಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ ಡಿವೈಎಫ್‌ಐ ಮುಖಂಡರಾದ ಸಲೀಂ, ರಫೀಕ್ ಹರೇಕಳ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಇಬ್ರಾಹೀಂ, ಆಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News