×
Ad

ಕ್ಯಾನ್ಸರ್, ಎಚ್‌ಐವಿ, ಹೃದ್ರೋಗಗಳ ಔಷಧಗಳ ಬೆಲೆಯಲ್ಲಿ ಶೇ.25 ಕಡಿತ

Update: 2016-08-01 23:43 IST

ಹೊಸದಿಲ್ಲಿ,ಆ.1: ಕ್ಯಾನ್ಸರ್, ಎಚ್‌ಐವಿ, ಸೂಕ್ಷ್ಮಜೀವಿ ಸೋಂಕು, ಉದ್ವಿಗ್ನತೆ ಮತ್ತು ಹೃದ್ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ 24 ಅಗತ್ಯ ಔಷಧಗಳ ಪರಿಷ್ಕೃತ ಬೆಲೆಗಳನ್ನು ಸರಕಾರವು ನಿಗದಿಗೊಳಿಸಿದ್ದು, ಸರಾಸರಿ ಸುಮಾರು ಶೇ.25ರಷ್ಟು ಇಳಿಕೆ ಮಾಡಲಾಗಿದೆ.
 ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು ಔಷಧ(ಬೆಲೆ ನಿಯಂತ್ರಣ) ತಿದ್ದುಪಡಿ ಆದೇಶ, 2016ರಡಿ ಅನುಬಂಧ-1ರಲ್ಲಿಯ 24 ಅನುಸೂಚಿತ ಔಷಧಗಳ ಗರಿಷ್ಠ ಬೆಲೆಗಳನ್ನು ಪರಿಷ್ಕರಿಸಿ ನಿಗದಿಗೊಳಿಸಿದೆ. ಜೊತೆಗೆ ಔಷಧ(ಬೆಲೆ ನಿಗದಿ) ಆದೇಶ, 2013ರಡಿಯೂ 31 ಔಷಧಗಳ ಬೆಲೆಗಳನ್ನು ನಿಗದಿಗೊಳಿಸಲಾಗಿದೆ ಎಂದು ಪ್ರಾಧಿಕಾರವು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News