×
Ad

ಆಝಾನ್ ಗೆ ಅವಹೇಳನ: ಕೇರಳ ಕಾಂಗ್ರೆಸ್ (ಬಿ) ನಾಯಕ ಬಾಲಕೃಷ್ಣ ಪಿಳ್ಳೆ ವಿರುದ್ಧ ತನಿಖೆ

Update: 2016-08-02 14:14 IST

 ಪತ್ತನಾಪುರಂ, ಆ.1: ಮುಸ್ಲಿಮ್, ಕ್ರೈಸ್ತ ಸಮುದಾಯವನ್ನು ನಿಂದಿಸಿ ಭಾಷಣ ಮಾಡಿದ ಕೇರಳ ಕಾಂಗ್ರೆಸ್(ಬಿ) ನಾಯಕ ಬಿ.ಬಾಲಕೃಷ್ಣ ಪಿಳ್ಳೆ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.ಕೊಲ್ಲಂ ಗ್ರಾಮೀಣ ಎಸ್ಪಿಗೆ ಪಿಳ್ಳೆ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು ಪುನಲ್ಲೂರು ಡಿವೈಎಸ್ಪಿಗೆ ತನಿಖೆಯ ಹೊಣೆ ವಹಿಸಲಾಗಿದೆ ಎಂದು ವರದಿಯಾಗಿದೆ.

 ಪತ್ತನಾಪುರಂ ಕಮುಕುಂಚೇರಿಯಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರನ್ನು ನಿಂದಿಸಿ ಪಿಳ್ಳೆ ಮಾತಾಡಿದ್ದರು.

      ನಾಯಿ ಬೊಗಳುವಂತೆ ತಿರುವನಂತಪುರದ ಮಸೀದಿಯಿಂದ ಅಝಾನ್ ನೀಡಲಾಗುತ್ತಿದೆ ಇಂತಹ ಬಹಳಷ್ಟು ನಿಂದನೀಯ ಪದಗಳನ್ನು ಮುಸ್ಲಿಮ್ ಸಮುದಾಯದ ವಿರುದ್ಧ ತನ್ನ ಭಾಷಣದಲ್ಲಿ ಅವರು ಬಳಸಿದ್ದಾರೆ ಎನ್ನಲಾಗಿದೆ. ಅವರು ನಿಂದಿಸಿ ಅಡಿದ ಮಾತುಗಳ ಧ್ವನಿಮುದ್ರಿಕೆ ಹೊರಬಂದಿದ್ದು ಅದರಲ್ಲಿ ಅವರು ಆಡಿದ್ದಾರೆನ್ನಲಾದ ಮಾತುಗಳು ಬಹಳ ಸ್ಪಷ್ಟವಾಗಿ ಕೇಳಿಸುತ್ತಿದೆ.

ಘಟನೆ ಬಹಿರಂಗೊಂಡಬಳಿಕ ಬಾಲಕೃಷ್ಣ ಪಿಳ್ಳೆ ವಿರುದ್ಧ ಪ್ರತಿಭಟನೆ ಸ್ಫೋಟವಾಗಿದ್ದು ಪಿಳ್ಳೆಯ ವಿರುದ್ಧ ಪತ್ತನಾಪುರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆದಿದೆ ಎಂದು ತಿಳಿದು ಬಂದಿದೆ. ಈ ನಡುವೆ ಪಿಳ್ಳೆ ಪ್ರತಿಕ್ರಿಯೆ ನೀಡಿ ತಾನು ಯಾರನ್ನುಆಕ್ಷೇಪಿಸಿಲ್ಲ ಎಂದು ರಂಗಪ್ರವೇಶಿಸಿದ್ದಾರೆ. ತನಗೆ ಎಲ್ಲ ಸಮುದಾಯಗಳೊಂದಿಗೆ ಗೌರವವಿದೆ. ಅಝಾನ್ ಕರೆ ವಿರುದ್ಧ ಕೆಟ್ಟದಾಗಿ ಮಾತಾಡಿಲ್ಲ ಎಂದು ಪಿಳ್ಳೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News