ಲಾರಿ-ಟ್ಯಾಂಕರ್ ಮಧ್ಯೆ ಢಿಕ್ಕಿ: ಲಾರಿ ಚಾಲಕನಿಗೆ ಗಾಯ
Update: 2016-08-02 18:41 IST
ಉಪ್ಪಿನಂಗಡಿ, ಆ.2: ಲಾರಿ ಮತ್ತು ಟ್ಯಾಂಕರ್ ನಡುವೆ ಢಿಕ್ಕಿ ಸಂಂಭವಿಸಿ ಲಾರಿ ಚಾಲಕ ಗಾಯಗೊಂಡ ಘಟನೆ ಮಂಗಳವಾರ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೇರಮೊಗರು ಬಳಿ ಸಂಭವಿಸಿದೆ.
ಲಾರಿ ಚಾಲಕ ಬೆಳ್ತಂಗಡಿ ತಾಲೂಕಿನ ಬಾರೆಂಕಿ ಎಂಬಲ್ಲಿನ ನಿವಾಸಿ ಚಂದ್ರಶೇಖರ್ ಗಾಯಗೊಂಡವರು.
ಬೆಂಗಳೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಡೀಸೆಲ್ ಟ್ಯಾಂಕರ್ ಹಾಗೂ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪುತ್ತೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.