ಪಾಣೆಮಂಗಳೂರು: ನೂತನ ಬಸ್ ತಂಗುದಾಣ ಉದ್ಘಾಟನೆ
Update: 2016-08-02 19:38 IST
ಬಂಟ್ವಾಳ, ಆ.2: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಇಲ್ಲಿನ ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ವತಿಯಿಂದ 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಸ್ ತಂಗುದಾಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಲೋಕಾರ್ಪಣೆಗೊಳಿಸಿದರು.
ಸೊಸೈಟಿ ಅಧ್ಯಕ್ಷ ಎಂ.ನಾರಾಯಣ ಸಫಲ್ಯ, ಉಪಾಧ್ಯಕ್ಷ ಜನಾರ್ದನ ಜಕ್ರಿಬೆಟ್ಟು, ನಿರ್ದೇಶಕರಾದ ಗಣೇಶ ಪಜೀರು, ಲಿಂಗಪ್ಪ ಕರ್ಕೇರ, ದಿನೇಶ ಬಂಗೇರ, ಪುರುಷೋತ್ತಮ ಎಸ್., ಅಚ್ಚುತ ವಿ.ಎಸ್., ವೀಣಾ ವಿಶ್ವನಾಥ, ಸುನೀತಾ ಪದ್ಮನಾಭ, ಕಾರ್ಯನಿರ್ವಹಣಾಧಿಕಾರಿ ವಸಂತ, ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಫಲ್ಯ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್. ಮಾವೆ, ಸತ್ಯದೇವತಾ ಟ್ರಸ್ಟಿನ ಅಧ್ಯಕ್ಷ ನಿತ್ಯಾನಂದ ಸಫಲ್ಯ, ಸಂಚಾರಿ ಠಾಣಾಧಿಕಾರಿ ಚಂದ್ರಶೇಖರಯ್ಯ ಮತ್ತಿತರರಿದ್ದರು.