ಕನ್ಯಾನ ಸರಕಾರಿ ಶಾಲಾ ಸೊತ್ತುಗಳ ನಾಶ: ಬಂಟ್ವಾಳ ಕ್ಯಾಂಪಸ್ ಫ್ರಂಟ್ ಖಂಡನೆ

Update: 2016-08-02 15:38 GMT

ಬಂಟ್ವಾಳ, ಆ.2: ತಾಲೂಕಿನ ಕನ್ಯಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸೊತ್ತುಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿರುವ ಕೃತ್ಯವನ್ನು ಖಂಡಿಸಿರುವ ಬಂಟ್ವಾಳ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ ಇದು ಸಮಾಜ ತಲೆ ತಗ್ಗಿಸುವಂತಹ ಕೃತ್ಯವಾಗಿದ್ದು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದೆ.

ಶಾಲೆಯ ಅಕ್ಷರ ದಾಸೋಹ ಕೊಠಡಿಯ ಗಾಜು, ನೀರಿನ ಟ್ಯಾಂಕ್, ಬಾಗಿಲು, ಪೈಪ್‌ಲೈನ್, ಶೌಚಾಲಯದ ಬೇಸಿನ್ ಹಾಗೂ ನಲ್ಲಿಗಳನ್ನು ದುರುದ್ದೇಶದಿಂದಲೇ ಹಾನಿಗೊಳಿಸಿದಂತೆ ಕಾಣುತ್ತಿದೆ. ರಾತ್ರಿ ಹೊತ್ತು ಶಾಲೆಗಳ ಆವರಣಕ್ಕೆ ಯಾರೂ ಪ್ರವೇಶಿಸದ ಹಾಗೆ ಕೌಂಪೌಂಡ್ ಗೋಡೆ ಹಾಗೂ ಕಾವಲುಗಾರರನ್ನು ನೇಮಿಸುವ ಮೂಲಕ ಶಾಲಾ ಸೊತ್ತುಗಳನ್ನು ಸಂರಕ್ಷಿಸಲು ಸರಕಾರ ಮುಂದಾಗಬೇಕು ಎಂದು ಸಿಎಫ್‌ಐ ತಾಲೂಕು ಅಧ್ಯಕ್ಷ ಅಶ್ವಾನ್ ಸಾದಿಕ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News