ಜೇಬಿನಲ್ಲಿ ಸ್ಫೋಟಿಸಿದ iPhone 6 !

Update: 2016-08-02 17:06 GMT

ಹೊಸದಿಲ್ಲಿ, ಆ.2 : ಆಸ್ಟ್ರೇಲಿಯಾದ ಪ್ರಜೆಯೊಬ್ಬ ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದ ಐಫೋನ್ ಸ್ಪೋಟಿಸಿ ವ್ಯಕ್ತಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ವರದಿಯಾಗಿದೆ.

ಗಾರೇತ್ ಕ್ಲಿಯರ್ ಎಂಬ ಮ್ಯಾನೇಜ್ ಮೆಂಟ್ ಸಲಹೆಗಾರ ಬೈಕ್ ನಲ್ಲಿ ಹೋಗುತ್ತಿದ್ದಾಗ  ತನ್ನ ಶಾರ್ಟ್ಸ್ ನ ಹಿಂಬದಿ ಜೇಬಿನಲ್ಲಿಟ್ಟ ಐಫೋನ್ ೬ ಇದ್ದಕ್ಕಿದ್ದಂತೆ ಸ್ಪೋಟಿಸಿದೆ. ಇದರಿಂದ ಆತನ  ಶಾರ್ಟ್ಸ್ ಸಂಪೂರ್ಣ ಸುಟ್ಟು ಹೋಗಿ ತೊಡೆಯ ಎರಡು ಪದರ ಚರ್ಮ ಸುಟ್ಟು ಹೋಗಿದೆ ! 

ಬಳಿಕ ಸಿಡ್ನಿಯ ರಾಯಲ್ ನಾರ್ತ್ ಶೋರ್ ಆಸ್ಪತ್ರೆಯಲ್ಲಿ ಅವರಿಗೆ ಚರ್ಮದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಐಫೋನ್ ನ ಹಿಂಬದಿ ಸಂಪೂರ್ಣ ಸುಟ್ಟು ಅದರ ಲೀಥಿಯಂ ಸೋರಿಕೆಯಾಗಿದೆ. ಫೋನ್ ನ ಮೇಲ್ಭಾಗಕ್ಕೆ ಮಾತ್ರ ಏನೂ ಹಾನಿಯಾಗಿಲ್ಲ. 

ಈ ಬಗ್ಗೆ ತನಿಖೆ ನಡೆಸುವುದಾಗಿ ಆಪಲ್ , ಕ್ಲಿಯರ್ ಗೆ ಹೇಳಿದೆ ಎಂದು ಹೇಳಲಾಗಿದೆ. 

ಕ್ಲಿಯರ್ ಈ ಬಗ್ಗೆ ಹೀಗೆ ಟ್ವೀಟ್ ಮಾಡಿದ್ದಾರೆ : 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News