ವಾರಣಾಸಿ: ಸೋನಿಯಾ ಅಸ್ವಸ್ಥ; ರೋಡ್‌ಶೋ ಅರ್ಧದಲ್ಲೇ ರದ್ದು

Update: 2016-08-02 16:15 GMT

ವಾರಣಾಸಿ,ಆ.2: ಪ್ರಧಾನಿ ನರೇಂದ್ರ ಮೋದಿಯವರ ಸ್ವಕ್ಷೇತ್ರವಾದ ವಾರಣಾಸಿಯಲ್ಲಿ ಮಂಗಳವಾರ ಭಾರೀ ಪ್ರಚಾರದೊಂದಿಗೆ ‘ರೋಡ್ ಶೋ’ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮಂಗಳವಾರ ತೀವ್ರ ಜ್ವರದ ಕಾರಣ ದಿಂದಾಗಿ, ಅರ್ಧದಲ್ಲೇ ತನ್ನ ಕಾರ್ಯಕ್ರಮವನ್ನು ಸೋನಿಯಾರ ರೋಡ್‌ಶೋಗೆ ಭಾರೀ ಜನಬೆಂಬಲ ವ್ಯಕ್ತವಾಗಿರುವುದು ಕಾಂಗ್ರೆಸ್‌ನ ನೈತಿಕ ಬಲವನ್ನು ಹೆಚ್ಚಿಸಿದೆ. ಬಿಜೆಪಿ, ಬಿಎಸ್ಪಿ ಹಾಗೂ ಸಮಾಜವಾದ ರದ್ದುಪಡಿಸಿದ್ದಾರೆ.

 ರೋಡ್‌ಶೋ ವಾರಣಾಸಿಯ ಲಾಹುರ್‌ಬಿರ್‌ಗೆ ತಲುಪಿದಾಗ ಸೋನಿಯಾ ಅಸ್ವಸ್ಥಗೊಂಡರೆನ್ನಲಾಗಿದೆ. ಕೂಡಲೇ ಕಾರ್ಯಕ್ರಮವನ್ನು ರದ್ದುಪಡಿಸಿದ ಅವರು, ವೈದ್ಯರ ಸಲಹೆಯಂತೆ ಹೊಸದಿಲ್ಲಿಗೆ ವಾಪಸಾಗಿದ್ದಾರೆ.

ಸೋನಿಯಾ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಈ ಮಧ್ಯೆ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಕಾಂಗ್ರೆಸ್ ಅಧ್ಯಕ್ಷೆಯ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಲು ಸೋನಿಯಾ ಇಂದು ಬೆಳಗ್ಗೆ ವಾರಣಾಸಿಯಲ್ಲಿ ರೋಡ್‌ಶೋ ಆರಂಭಿಸಿದ್ದರು. ರಸ್ತೆ ಇಕ್ಕೆಲಗಳಲ್ಲಿ ಕಿಕ್ಕಿರಿದ ನೆರೆದಿದ್ದ ಜನರ ಹರ್ಷೋದ್ಘಾರದ ನಡುವೆ ತೆರೆದ ವಾಹನದಲ್ಲಿ ಸುಮಾರು 8 ಕಿ.ಮೀ.ವರೆಗೆ ಸೋನಿಯಾ ಪ್ರಯಾಣಿಸಿದ್ದರು.

ನಗರದ ಪ್ರಮುಖ ಸ್ಥಳಗಳಲ್ಲಿ ಪಕ್ಷದ ಬೆಂಬಲಿಗರು ಜಾಥಾವನ್ನು ನಿಲ್ಲಿಸಿ ಸೋನಿಯಾರನ್ನು ಸನ್ಮಾನಿಸಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಅವರು ರೋಡ್‌ಶೋ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News