ಯುವಕನಿಗೆ ಬಜರಂಗಿಗಳಿಂದ ಹಲ್ಲೆ
Update: 2016-08-02 22:35 IST
ಬೆಳ್ತಂಗಡಿ, ಆ2: ಧರ್ಮಸ್ಥಳ ಗ್ರಾಮದ ನಿವಾಸಿ ಚಂದ್ರಕಾಂತ ( 31) ಎಂಬವರ ಮೇಲೆ ಭಜರಂಗ ದಳದ ಮುಖಂಡ ಭಾಸ್ಕರ್ ಧರ್ಮಸ್ಥಳ ಮತ್ತು ತಂಡದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಗಾಯಾಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ಸಂಜೆಯ ವೇಳೆ ಧರ್ಮಸ್ಥಳ ಪೇಟೆಯ ಬಳಿ ವಾಲೀಬಾಲ್ ಆಟ ಆಡುತ್ತಿದ್ದ ವೇಳೆ ಭಾಸ್ಕರ ಹಾಗೂ ಸುಮಾರು ಹತ್ತು ಮಂದಿಯ ತಂಡ ಮಾರಕಾಯುಧಗಳೊಂದಿಗೆ ಚಂದ್ರಕಾಂತನ ಮೇಲೆ ಹಲ್ಲೆ ನಡೆಸಿದ್ದಾರೆ.
ಚಂದ್ರಕಾಂತನ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಉಂಗುರ ಕಳ್ಳತನವಾಗಿದ್ದು ಪೂರ್ವದ್ವೇಷವೇ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ ಗಾಯಾಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಧಮರ್ಸ್ಥಳ ಠಾಣೆಗೆ ದೂರು ನೀಡಲಾಗಿದೆ.