ಪ್ರಾಮಾಣಿಕತೆ ಮೆರೆದ ಆಟೊ ಚಾಲಕ
Update: 2016-08-02 23:44 IST
ಮಣಿಪಾಲ, ಆ.2: ಆಟೊರಿಕ್ಷಾದಲ್ಲಿ ಪ್ರಯಾಣಿಸುವ ವೇಳೆ ಬಿಟ್ಟು ಹೋಗಿದ್ದ ಕ್ಯಾಮೆರಾವನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಆಟೊ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಮಣಿಪಾಲದ ಮಣ್ಣಪಳ್ಳದಲ್ಲಿ ನಡೆದಿದೆ.
ಮಣ್ಣಪಳ್ಳದಲ್ಲಿ ಆರಂಭಗೊಂಡಿರುವ ದೋಣಿ ವಿಹಾರದ ಬಗ್ಗೆ ವರದಿ ಮಾಡಲು ಲೇಖಕ ವಿ.ಬಾಲಕೃಷ್ಣ ಶಿರ್ವ ಪ್ರಕಾಶ್ ಶೆಟ್ಟಿ ಎಂಬವರ ರಿಕ್ಷಾದಲ್ಲಿ ಬಂದಿದ್ದರು. ಆ ಸಂದರ್ಭ ಕ್ಯಾಮೆರಾವನ್ನು ರಿಕ್ಷಾದಲ್ಲೇ ಬಿಟ್ಟು ಮರೆತು ಹೋಗಿದ್ದರು. ಬಳಿಕ ಅದನ್ನು ಗಮನಿಸಿದ ಆಟೊ ಚಾಲಕ ಪ್ರಕಾಶ್‌ಶೆಟ್ಟಿ ಕ್ಯಾಮೆರಾವನ್ನು ಮಣಿಪಾಲದ ಆಟೊ ಚಾಲಕರ ಸಂಘದ ಕಚೆೇರಿಗೆ ಒಪ್ಪಿಸಿ ವಾರಸುದಾರರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಪ್ರಾಮಾಣಿಕತೆ ಮೆರೆದಿದ್ದಾರೆೆ.