×
Ad

ಎಣ್ಮಕಜೆ ಗ್ರಾ.ಪಂ.ಆಡಳಿತ ವೈಫಲ್ಯ ಆರೋಪ: ಐಕ್ಯರಂಗದಿಂದ ಧರಣಿ

Update: 2016-08-03 13:11 IST

ಕಾಸರಗೋಡು, ಆ.3: ಎಣ್ಮಕಜೆ ಗ್ರಾಮಪಂಚಾಯತ್‌ನ ಆಡಳಿತ ಯಂತ್ರ ವಿಫಲಗೊಂಡಿದೆ ಎಂದು ಆರೋಪಿಸಿ ಐಕ್ಯರಂಗದ ನೇತೃತ್ವದಲ್ಲಿ ಗ್ರಾಮಪಂಚಾಯತ್ಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಯಿತು.

ಪೆರ್ಲ ಪೇಟೆಯಿಂದ ಎಣ್ಮಕಜೆ ಪಂಚಾಯತ್ ಕಚೇರಿಯವರೆಗೆ ಜಾಥಾ ನಡೆಯಿತು. ಬಳಿಕ ಪಂಚಾಯತ್ ಗೇಟ್ ಮುಂಭಾಗದಲ್ಲಿ ಸಭೆ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಸ್. ಸೋಮಶೇಖರ ಉದ್ಘಾಟಿಸಿ ಮಾತನಾಡಿ, ಎಣ್ಮಕಜೆ ಪಂಚಾಯತ್ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News