×
Ad

ಪುತ್ತೂರು: ವಾಹನ ಕಳವು ಆರೋಪಿ ಪೊಲೀಸ್ ವಶಕ್ಕೆ

Update: 2016-08-03 13:54 IST

ಪುತ್ತೂರು, ಆ.3: ಅಂತಾರಾಜ್ಯ ವಾಹನ ಕಳ್ಳತನ ಪ್ರಕರಣವನ್ನು ಬೇಧಿಸಿದ ಪುತ್ತೂರು ನಗರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳದ ನಿವಾಸಿ ಅಬ್ದುಸ್ಸಲಾಂ ಯಾನೆ ಸಲಾಂ ಯಾನೆ ಸಲ್ಲು (29) ಬಂಧಿತ ಆರೋಪಿ.

ಈತ ಮಂಗಳವಾರ ಕದ್ದ ಬೈಕೊಂದರಲ್ಲಿ ಮಂಗಳೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದಾಗ ಖಚಿತ ಮಾಹಿತಿ ಪಡೆದ ಪುತ್ತೂರು ಪೊಲೀಸರು ಆತನನ್ನು ಕಬಕ ಸಮೀಪದ ಮುರ ಎಂಬಲ್ಲಿ ತಡೆದು ವಶಕ್ಕೆ ಪಡೆದುಕೊಂಡಿದ್ದರು. 2015ರ ನವೆಂಬರ್‌ನಿಂದ 2016ರ ಮಾರ್ಚ್‌ವರೆಗೆ ನಡೆದ ಹಲವು ಕಳವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದು, ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ 3 ಬೈಕ್, ಒಂದು ರಿಕ್ಷಾ, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 1 ರಿಕ್ಷಾ ಮತ್ತು ಕಾಸರಗೋಡಿನ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳವು ಮಾಡಿದ ಪ್ರಕರಣದ ಆರೋಪ ಈತನ ಮೇಲಿದೆ. ಇತರ ಆರೋಪಿಗಳಾದ ಪುತ್ತೂರು ತಾಲೂಕಿನ ಸವಣೂರು ನಿವಾಸಿಗಳಾದ ಆಸಿಫ್ ಮತ್ತು ತೌಸೀಫ್ ಎಂಬವರು ಸೇರಿಕೊಂಡಿದ್ದರು. ಅವರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.

ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಸಬ್‌ಇನ್‌ಸ್ಪೆಕ್ಟರ್ ಅಬ್ದುಲ್ ಖಾದರ್, ಸಿಬ್ಬಂದಿಯಾದ ಸ್ಕರಿಯಾ ಮತ್ತು ಪ್ರಶಾಂತ್ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆ. 5ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News