×
Ad

ಕಾಸರಗೋಡು: ನೂತನ ಜಿಲ್ಲಾಧಿಕಾರಿಯಾಗಿ ಕೆ.ಜೀವನ್ ಬಾಬು ನೇಮಕ

Update: 2016-08-03 18:02 IST

ಕಾಸರಗೋಡು, ಆ.3: ಕಾಸರಗೋಡು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೆ.ಜೀವನ್ ಬಾಬುರನ್ನು ನೇಮಿಸಲಾಗಿದೆ.

ಹಾಲಿ ಜಿಲ್ಲಾಧಿಕಾರಿ ಇ. ದೇವದಾಸನ್ರನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ. ಫೆಬ್ರವರಿಯಲ್ಲಿ ಮುಹಮ್ಮದ್ ಸಗೀರ್ ವರ್ಗಾವಣೆಗೊಂಡಿದ್ದ ಬಳಿಕ ದೇವದಾಸ್ರನ್ನು ನೇಮಿಸಲಾಗಿತ್ತು. ಆರು ತಿಂಗಳಲ್ಲೇ ದೇವದಾಸ್ರನ್ನು ವರ್ಗಾಯಿಸಲಾಗಿದೆ.

ಕೆ. ಜೀವನ್‌ಬಾಬು ಅಬಕಾರಿ ಜಂಟಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಉಪ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News