ಬ್ಲಡ್ ಡೋನರ್ಸ್ ಮಂಗಳೂರು ತಂಡದ ನೂತನ ಸಮಿತಿ ರಚನೆ

Update: 2016-08-03 12:52 GMT

ಮಂಗಳೂರು, ಆ.3: ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಪರಿಸರದಲ್ಲಿ ರಕ್ತದಾನದ ಮೂಲಕ ಬಡ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಕರಿಸುತ್ತಿರುವ ಬ್ಲಡ್ ಡೊನರ್ಸ್ ಮಂಗಳೂರು ತಂಡದ ನೂತನ ಸಮಿತಿ ರಚನೆ ಹಾಗೂ ಸಮಾಲೋಚನಾ ಸಭೆಯು ಸೋಮವಾರ ಜರಗಿತು.

ಸಮಿತಿಯ ನೂತನ ಅಧ್ಯಕ್ಷರಾಗಿ ಸಿದ್ದೀಕ್ ಮಂಜೇಶ್ವರ ಪುನರಾಯ್ಕೆಯಾದರೆ, ಉಪಾಧ್ಯಕ್ಷರಾಗಿ ನಝೀರ್ ಉಳಾಯಿಬೆಟ್ಟು, ಕಾರ್ಯದರ್ಶಿಯಾಗಿ ಇಮ್ರಾನ್ ಉಳ್ಳಾಲ, ಉಪ ಕಾರ್ಯದರ್ಶಿಯಾಗಿ ಲತೀಫ್ ಉಪ್ಪಿನಂಗಡಿ ಆಯ್ಕೆಯಾದರು.

ಸಮಿತಿಯ ಕಾರ್ಯನಿರ್ವಾಹಕರಾಗಿ ದಾವೂದ್ ಬಜಾಲ್, ಖಜಾಂಜಿಯಾಗಿ ಅಶ್ರಫ್ ಉಪ್ಪಿನಂಗಡಿ, ಮಾಧ್ಯಮ ಸಲಹೆಗಾರರಾಗಿ ಶಾಹುಲ್ ಹಮೀದ್ ಕಾಶಿಪಟ್ಣ, ನಿಝಾಮುದ್ದೀನ್ ತಬೂಕ್ ಮತ್ತು ನಿಝಾಮ್ ನಿಜ್ಜು ಮಂಗಳೂರು, ಲೆಕ್ಕ ಪರಿಶೋಧಕರಾಗಿ ತನ್ವೀರ್ ಜೋಕಟ್ಟೆ ಹಾಗೂ ಕಾರ್ಯಕ್ರಮಗಳ ಮೇಲ್ವಿಚಾರಕರಾಗಿ ಇರ್ಶಾದ್ ಉಚ್ಚಿಲರನ್ನು ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿ ಸದಸ್ಯರಾಗಿ ಶಂಶುದ್ದೀನ್ ಉಪ್ಪಿನಂಗಡಿ, ಸಮೀರ್ ಉಪ್ಪಿನಂಗಡಿ, ಇಮ್ತಿಯಾಝ್ ಬಜ್ಪೆ, ಅನ್ಸಾರ್ ಮೂಡುಬಿದಿರೆ, ಮುಸ್ತಪಾ ಕೆ.ಸಿ.ರೋಡ್, ಫಯಾಝ್ ಮೊಂಟೆಪದವು, ಝಿಯಾ ವಿಟ್ಲ, ನಝೀರ್ ಹಂಡೇಲ್, ಇಲ್ಯಾಸ್ ಸಾಣೂರು, ಸಫ್ವಾನ್ ಕೆಂಪಿ, ಹನೀಫ್ ಮುಡಿಪು, ಸಮದ್ ವಿಟ್ಲ ಆಯ್ಕೆಯಾದರು. ಸಮಿತಿಯ ಮೂಲಕ ಮುಂದಕ್ಕೆ ನಡೆಯಬೇಕಾದ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ದಾವೂದ್ ಬಜಾಲ್ ಸ್ವಾಗತಿಸಿ, ನಿಝಾಮುದ್ದೀನ್ ತಬೂಕ್ ವಂದಿಸಿದರು. ಸಿದ್ದೀಕ್ ಮಂಜೇಶ್ವರ, ಅಶ್ರಫ್ ಉಪ್ಪಿನಂಗಡಿ, ಇಮ್ಮು ಉಳ್ಳಾಲ, ಶಾಹುಲ್ ಹಮೀದ್ ಕಾಶಿಪಟ್ಣ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News