ಬ್ಯಾರಿ ಫೆಲೋಶಿಪ್‌ಗೆ 8 ಮಂದಿ ಆಯ್ಕೆ

Update: 2016-08-03 13:42 GMT

ಮಂಗಳೂರು, ಆ.3: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯ ದೃಷ್ಟಿಯಿಂದ 2015-16ನೆ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬರುವ ಕಲೆ, ಸಾಹಿತ್ಯ, ಸಮಾಜಸೇವೆ, ನ್ಯಾಯಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಷಯಗಳಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ತರಗತಿಗಳ ಪ್ರಥಮ ವರ್ಷದಲ್ಲಿ ಅಭ್ಯಸಿಸುತ್ತಿರುವ ಬ್ಯಾರಿ ಭಾಷೆ ಬಲ್ಲಂತಹ ಮತ್ತು ಬ್ಯಾರಿ ಭಾಷೆ, ಸಾಹಿತ್ಯ ಹಾಗೂ ಬ್ಯಾರಿ ಸಂಸ್ಕೃತಿಯ ಅಧ್ಯಯನ ಮಾಡಲು ಆಸಕ್ತಿ ಇರುವ ಒಟ್ಟು 8 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ.
 
1. ನಾಝಿಯ (ಬಿ.ಎ.): ಬ್ಯಾರಿ ಭಾಷಾ ಸಾಹಿತ್ಯದ ಬೆಳವಣಿಗೆ, ಜಾನಪದ ಕತೆ, ಹಾಡುಗಳು ಸಾಹಿತ್ಯ ಪ್ರಕಾರಗಳು, ಕತೆ, ಕಾದಂಬರಿ, ಕವನ, ನಾಟಕ, ಪ್ರಬಂಧ ಮತ್ತಿತರ ಪ್ರಾಕಾರಗಳು. ಸಿ.ಡಿ, ಕ್ಯಾಸೆಟ್, ಸಿನೆಮಾಗಳು ಅವುಗಳ ಪ್ರಭಾವ, ಮುಂದಿನ ಭವಿಷ್ಯ

2. ಫಾತಿಮ ರಿಝ್ವಾನಾ (ಬಿ.ಎ.): ಬ್ಯಾರಿ ಕಲೆ ಎಂದರೇನು? ಕೆತ್ತನೆ ಕಲೆ ಮತ್ತು ಸಾರ್ಸನಿಕ ಕಲಾ ಪ್ರಭಾವ. ಬ್ಯಾರಿ ಕಲಾಪ್ರಾಕಾರಗಳು ಉಗಮ, ಪ್ರಭಾವ ಮತ್ತು ಭವಿಷ್ಯ.

3.ಫಾಹಿಮಾ (ಎಂ.ಎ.):ಬ್ಯಾರಿ ಭಾಷೆ ಪ್ರಾದೇಶಿಕ ಭಾಷೆಯಾಗಿ ಬಳಕೆ, ಉದ್ಯಮ- ವ್ಯವಹಾರಗಳಲ್ಲಿ ಹಾಗೂ ಸಾಹಿತ್ಯದಲ್ಲಿ ಭಾಷಾ ಬಳಕೆ- ಬ್ಯಾರಿ ಭಾಷೆಯ ಭವಿಷ್ಯ

4. ಫಾತಿಮಾ ರುಫೀದ (ಬಿ.ಎ.): ಬ್ಯಾರಿ ಭಾಷಾ ಸಾಹಿತ್ಯದ ಆರಂಭ, ಪ್ರಾಚೀನತೆ, ಜಾನಪದ ಹಾಡುಗಳು, ಕತೆಗಳು, ಒಗಟುಗಳು, ಗಾದೆಗಳು, ಪ್ರಸ್ತುತ ಸ್ಥಿತಿಗತಿಗಳು ಮತ್ತು ಸವಾಲುಗಳು

5. ಆಯಿಶಾ (ಬಿ.ಎ.): ಬ್ಯಾರಿ ಭಾಷೆ; ಉಗಮ, ಪ್ರಾಚೀನತೆ ಮತ್ತು ವ್ಯಾಪ್ತಿ. ಭಾಷಾ ಪ್ರಬೇಧ. ಬ್ಯಾರಿ ಲಿಪಿ ಮತ್ತು ಬಳಕೆಯೊಂದಿಗೆ

6. ಬದ್ರುದ್ದೀನ್ (ಎಲ್.ಎಲ್.ಬಿ.) ಬ್ಯಾರಿ ಜನಾಂಗದ ವೈಶಿಷ್ಟಗಳು. ವ್ಯಾಪ್ತಿ, ಪ್ರಾದೇಶಿಕ ಧರ್ಮಗಳ ಪ್ರಭಾವ ವೈವಿಧ್ಯತೆಗಳು, ಜನಾಂಗದ ಅಭಿವೃದ್ಧಿಗೆ ಸಂಸ್ಕೃತಿಯ ಕೊಡುಗೆ ಮತ್ತು ಭವಿಷ್ಯ, ಪೂರಕವಾದ ಅಂಶಗಳು.

7. ಸಲೀನಾ ಬಾನು (ಎಂ.ಎ.): ಬ್ಯಾರಿ ಜನಾಂಗದ ಉಗಮ, ಚರಿತ್ರೆ ಮತ್ತು ಸಂಸ್ಕೃತಿಯ ಬೆಳವಣಿಗೆ, ತುಳು, ಜೈನ ಮತ್ತಿತರ ಸಾಂಸ್ಕೃತಿಕ ಪ್ರಭಾವ, ಸಂಸ್ಕೃತಿಯ ವೈಶಿಷ್ಟಗಳು ಮತ್ತು ಭವಿಷ್ಯ.

8. ರೈಯಾನ (ಬಿ.ಎ.):ಬ್ಯಾರಿ ಲಲಿತ ಕಲಾರಂಗ. ನಾಟಕ, ಸಿನೆಮಾಗಳ ಚರಿತ್ರೆ. ಪ್ರಭಾವ ಮತ್ತು ಭವಿಷ್ಯ. ಬ್ಯಾರಿ ಕಲಾರಂಗದಲ್ಲಿ ಧಾರ್ಮಿಕ ಪ್ರಭಾವ ಮತ್ತು ಭವಿಷ್ಯ)

ಫೆಲೋಶಿಪ್‌ನ ಮೊತ್ತವು ತಲಾ 40,000ರೂ. ಆಗಿದ್ದು, ಇದರಲ್ಲಿ ಅಧ್ಯಯನ ವೇತನಕ್ಕಾಗಿ 6,000 ರೂ.ನ್ನು ನಂತರ ಉಳಿದ ಮೊತ್ತವನ್ನು ಅಧ್ಯಯನ ಪ್ರಬಂಧ ಸ್ವೀಕೃತಗೊಂಡ ಬಳಿಕ ನೀಡಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News