×
Ad

49 ಸಿಖ್ ವಿರೋಧಿ ದಂಗೆ ಪ್ರಕರಣಗಳ ಮರುತನಿಖೆ:ಕೇಂದ್ರ ಸಚಿವ ಆಹೀರ್

Update: 2016-08-03 19:36 IST

ಹೊಸದಿಲ್ಲಿ,ಆ.3: 1984ರ ಸಿಖ್ ವಿರೋಧಿ ದಂಗೆಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು 49 ಪ್ರಕರಣಗಳನ್ನು ಮರುತನಿಖೆಗಾಗಿ ಗುರುತಿಸಿದೆ ಎಂದು ಸಹಾಯಕ ಗೃಹಸಚಿವ ಹಂಸರಾಜ್ ಗಂಗಾರಾಮ ಆಹೀರ್ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು, 1984ರ ಸಿಖ್ ವಿರೋಧಿ ದಂಗೆಗಳಿಗೆ ಸಂಬಂಧಿಸಿದಂತೆ ದಿಲ್ಲಿಯಲ್ಲಿ ದಾಖಲಾಗಿದ್ದ ಮತ್ತು ಬಳಿಕ ಮುಚ್ಚಲಾದ ಗಂಭೀರ ಪ್ರಕರಣಗಳ ತನಿಖೆ/ಮರುತನಿಖೆಗಾಗಿ ಸರಕಾರವು ತನ್ನ 2015,ಫೆ.12ರ ಆದೇಶದಡಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ದಾಖಲಾಗಿರುವ 650ಕ್ಕೂ ಪ್ರಕರಣಗಳ ಪೈಕಿ 2016,ಜು.29ರವರೆಗೆ 49 ಪ್ರಕರಣಗಳನ್ನು ಮರುತನಿಖೆಗಾಗಿ ಗುರುತಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News