×
Ad

ಸೌದಿಯಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರ ಪಟ್ಟಿ ದೊರಕಿಲ್ಲ: ಸಚಿವ ರೋಶನ್ ಬೇಗ್

Update: 2016-08-03 20:20 IST

ಮಂಗಳೂರು, ಆ.3: ಆರ್ಥಿಕ ಹಿಂಜರಿತದಿಂದಾಗಿ ಸೌದಿಯಲ್ಲಿ ಸಂಕಷ್ಟದಲ್ಲಿರುವ ಭಾರತೀಯರಲ್ಲಿ ಕನ್ನಡಿಗರ ಪಟ್ಟಿ ಇನ್ನೂ ದೊರಕಿಲ್ಲ. ಸಿಕ್ಕಿದಾಕ್ಷಣ ಅವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಶನ್ ಬೇಗ್ ಹೇಳಿದ್ದಾರೆ.

ಮಂಗಳೂರಿನ ಹಳೆ ವಿಮಾನ ನಿಲ್ದಾಣದಲ್ಲಿ ಮದೀನಾಕ್ಕೆ ಭಾರತದಿಂದ ಪ್ರಥಮ ಹಜ್ ವಿಮಾನ ಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.

ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ಹಾಗೂ ವಿದೇಶಾಂಗ ಸಚಿವರ ಜತೆಗೆ ಚರ್ಚಿಸಲಾಗಿದೆ. ಸಂಕಷ್ಟದಲ್ಲಿರುವ ಭಾರತೀಯರ ವಿವರ ನೀಡುವಂತೆ ತಿಳಿಸಲಾಗಿದೆ. ಪಟ್ಟಿ ಸಿಕ್ಕಿದ ತಕ್ಷಣವೇ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News