×
Ad

ಮಧ್ಯವರ್ತಿಗಳ ಮೊರೆ ಹೋಗಬೇಡಿ: ಶಾಸಕಿ ಶಕುಂತಳಾ ಟಿ.ಶೆಟ್ಟಿ

Update: 2016-08-03 20:40 IST

ಪುತ್ತೂರು, ಆ.3: ತಾಲೂಕಿನ ಕೆಯ್ಯೂರು ಮತ್ತು ಕೆದಂಬಾಡಿ ಗ್ರಾಮ ವ್ಯಾಪ್ತಿಯ 94 ಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಕೆಯ್ಯೂರು ಗ್ರಾ.ಪಂ.ಸಭಾಂಗಣದಲ್ಲಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಶಾಸಕರು, ಯಾರೂ ಕೂಡ ಮಧ್ಯವರ್ತಿಗಳಿಗೆ ಹಣ ಕೊಟ್ಟು ಮೋಸ ಹೋಗಬೇಡಿ ಎಂದು ಗ್ರಾಮಸ್ಥರಿಗೆ ಸೂಚನೆ ನೀಡಿದರು. 5 ಸೆಂಟ್ಸ್‌ವರೆಗೆ ಫಲಾನುಭವಿಗಳು 4.5 ಸಾವಿರ ರೂ.ನ್ನು ಸರಕಾರಕ್ಕೆ ಪಾವತಿಸಬೇಕಾಗುತ್ತದೆ. ಇದರಿಂದ ಹೆಚ್ಚು ಹಣವನ್ನು ಯಾರಾದರೂ ಪಡೆದುಕೊಂಡಲ್ಲಿ ಕಂದಾಯ ಇಲಾಖೆಗೆ ದೂರು ನೀಡಬೇಕು ಎಂದು ತಿಳಿಸಿದರು.

ಈ ಸಂದಭರ್ದಲ್ಲಿ ಕೆಯ್ಯೂರು ಗ್ರಾಮದ 8 ಮಂದಿಗೆ ಉಚಿತ ಹಕ್ಕುಪತ್ರ ವಿತರಣೆ ಮಾಡಲಾಯಿತು. ಉಳಿದಂತೆ 23 ಮಂದಿಗೆ ಹಣ ಪಾವತಿಸಲು ನೋಟಿಸ್ ವಿತರಿಸಲಾಯಿತು. ಕೆದಂಬಾಡಿ ಗ್ರಾಮದ 4 ಮಂದಿಗೆ ಹಕ್ಕುಪತ್ರ ವಿತರಿಸಲಾಯಿತು.

 ವೇದಿಕೆಯಲ್ಲಿ ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್, ತಹಶೀಲ್ದಾರ್ ಸಣ್ಣ ರಂಗಯ್ಯ, ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ,ಗ್ರಾ.ಪಂ ಅಧ್ಯಕ್ಷ ಬಾಬು.ಬಿ, ಸದಸ್ಯ ಎ.ಕೆ ಜಯರಾಮ ರೈ ಉಪಸ್ಥಿತರಿದ್ದರು. ಕೆಯ್ಯೂರು ಗ್ರಾಮಕರಣಿಕೆ ವಾರಿಜ, ಸಹಾಯಕ ನಾರಾಯಣ್, ಕೆದಂಬಾಡಿ ಗ್ರಾಮ ಕರಣಿಕೆ ತುಳಸಿ, ಸಹಾಯಕ ಶ್ರೀಧರ್ ಸಹಕರಿಸಿದ್ದರು. ಗ್ರಾ.ಪಂ ಅಭಿವೃದ್ಧಿ ಅಕಾರಿ ಸುಬ್ರಹ್ಮಣ್ಯ ಕೆ.ಎಂ ಸ್ವಾಗತಿಸಿ, ವಂದಿಸಿದರು.

ಸಾವಿನಲ್ಲೂ ಸಂಭ್ರಮ ಪಡೆಯುವ ವಿಕೃತ ಮನಸ್ಸಿನ ಕೆಲವರು ರಾಜ್ಯದಲ್ಲಿ ಹುಟ್ಟಿಕೊಂಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸಂಸ್ಕಾರ ಇರುವ ಕುಟುಂಬದಿಂದ ಬಂದ ಯಾರೇ ಆಗಲಿ ಸಾವಿನಲ್ಲಿ ಸಂಭ್ರಮಿಸಲು ಸಾಧ್ಯವಿಲ್ಲ. ಮಾನವೀಯತೆ ನಾಶವಾಗುತ್ತಿರುವುದು ಮುಂದಿನ ದಿನಗಳಲ್ಲಿ ವಿನಾಶಕ್ಕೂ ದಾರಿಯಾಗಲಿದೆ.

ಶಕುಂತಳಾ ಶೆಟ್ಟಿ, ಶಾಸಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News