ನಾಳೆ ‘ಮಾಸುನ್’ ಟೈಲ್ಸ್ ಗ್ರಾನೈಟ್ಸ್ ಶೋ ರೂಂ ಉದ್ಘಾಟನೆ
Update: 2016-08-03 22:51 IST
ಮಂಗಳೂರು, ಆ. 3: ನಗರದ ಜಪ್ಪಿನಮೊಗರಿನಲ್ಲಿ ನೂತನ ‘ಮಾಸುನ್’ ಟೈಲ್ಸ್ ಗ್ರಾನೈಟ್ಸ್ ಫ್ಯಾಕ್ಟರಿ ಔಟ್‌ಲೆಟ್ ಶೋ ರೂಂ ಆಗಸ್ಟ್ 5ರಂದು ಸಂಜೆ 4 ಗಂಟೆಗೆ ಶುಭಾರಂಭಗೊಳ್ಳಲಿದೆ.
ನೂತನ ಶೋ ರೂಂನ ಉದ್ಘಾಟನೆಯನ್ನು ಅಬ್ದುಲ್ ರಝಾಕ್ ಮೊದೀನ್ ನೆರವೇರಿಸಲಿದ್ದು, ಮಾಸುನ್ ಮುನೀರ್ ಮತ್ತು ಮಿಸ್ಬಾ ಮುನೀರ್ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಕಾರ್ಪೊರೇಟರ್ ಜೆ.ಸುರೇಂದ್ರ, ಕ್ರೈಡಾ ಅಧ್ಯಕ್ಷ ಡಿ.ಪಿ.ಮೆಹ್ತಾ, ಟಿ.ವಿನಾಯಕ ಪೈ, ಮುಹಮ್ಮದ್ ಇಕ್ಬಾಲ್, ಅಬೂಬಕರ್ ಸಿದ್ದೀಕ್, ರವೂಫ್ ಪುತ್ತಿಗೆ, ಹೈದರ್ ಅಲಿ ಕೆ., ಲೂಯಿಸ್ ಪಿಂಟೊ, ಸುದೇಶ್ ಕುಮಾರ್, ದಾಮೋದರ್ ಶೆಣೈ, ಅಬ್ದುಲ್ಲಾಹ್ ಬಿ., ಇಫ್ತಿಕಾರ್ ಅಹ್ಮದ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.