ದರೋಡೆ: ಪ್ರಕರಣ ದಾಖಲು
Update: 2016-08-03 23:52 IST
ಕಾಸರಗೋಡು, ಆ.3: ಸ್ಕೂಟರ್ ತಡೆದು ಪೆಟ್ರೋಲ್ ಪಂಪ್‌ಮಾಲಕನ ಲಕ್ಷಾಂತರ ರೂ. ನಗದು, ಎಟಿಎಂ ಕಾರ್ಡ್‌ಗಳನ್ನು ದರೋಡೆ ಮಾಡಿದ ಘಟನೆ ತ್ರಿಕ್ಕರಿಪುರ ಕನ್ನಾಡಿಪಾರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ದರೋಡೆಗೊಳಗಾದವರನ್ನು ರಾಮಕೃಷ್ಣ (52) ಎಂದು ಗುರುತಿಸಲಾಗಿದೆ.ಅವರು ಮನೆಗೆ ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ಅವರ ಬಳಿಯಿದ್ದ 3.16 ಲಕ್ಷ ರೂ. ಮತ್ತು ಮೂರು ಎಟಿಎಂ ಕಾರ್ಡ್ ಗಳನ್ನು ದರೋಡೆ ಗೈದಿದೆ. ಎಟಿಎಂ ಕಾರ್ಡು ಬಳಸಿ ಹಣ ಅಪಹರಿಸಲು ತಂಡ ಯತ್ನಿಸಿದ್ದು ಆದರೆ ವಿಫಲಗೊಂಡಿದೆ. ಚಿಮೇನಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.