×
Ad

‘ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ’

Update: 2016-08-03 23:57 IST

ಮೂಡುಬಿದಿರೆ, ಆ.3: ವಿಶಿಷ್ಟ ಶಿಲ್ಪಕಲೆ, ಜೈನಧರ್ಮದ ಶ್ರೀಮಂತಿಕೆಯನ್ನು ಸಾರುತ್ತಿರುವ ಮೂಡುಬಿದಿರೆಗೆ ಪುರಾತತ್ವ ಸರ್ವೇಕ್ಷನ ಇಲಾಖೆ ಹಾಗೂ ಸರಕಾರದಿಂದ ಅನುದಾನ ಬಿಡುಗಡೆಗೊಂಡಲ್ಲಿ ಮತ್ತಷ್ಟು ಆಕರ್ಷಕ ಪ್ರವಾಸೋದ್ಯಮ ಕೇಂದ್ರವಾಗಿ ಮಾಡಲು ಸಾಧ್ಯವಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಎ.ಎಂ. ಕುಂಜಪ್ಪತಿಳಿಸಿದರು. ಮೂಡುಬಿದಿರೆ ಐತಿಹಾಸಿಕ ಸಾವಿರ ಕಂಬದ ಬಸದಿಗೆ ಬುಧವಾರ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಶಾಸಕ ಕೆ.ಅಭಯಚಂದ್ರ ಜೈನ್ ಮಾತನಾಡಿ, ಕುಂಜಪ್ಪಈ ಹಿಂದೆ ದ.ಕ. ಜಿಲ್ಲೆಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಸಂದರ್ಭ ಸಾವಿರ ಕಂಬದ ಬಸದಿಯಲ್ಲಿ ಕರಾವಳಿ ಉತ್ಸವ ಆಯೋಜಿಸಿದ್ದರು. ಅವರು ಮೂಡುಬಿದಿರೆ ಅಭಿವೃದ್ಧಿಗೆ ನೀಡಿರುವ ಸಲಹೆಗಳನ್ನು ಸರಕಾರದ ಮುಂದಿಡುತ್ತೇನೆ ಎಂದರು.
ಮೂಡುಬಿದಿರೆ ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಶಕುಂತಳಾ ದೇವಾಡಿಗ, ಪಿ.ಕೆ.ಥೋಮಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್, ದಿನೇಶ್ ಆನಡ್ಕ, ಯುವರಾಜ್ ಜೈನ್, ಬ್ಲಾಕ್ ವಲೇರಿಯನ್ ಸಿಕ್ವೇರ, ಸಂಜಯಂತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News