ಬೆಂಕಿ ಅವಘಡ: ವಲಸೆ ಕಾರ್ಮಿಕ ಮೃತ್ಯು
Update: 2016-08-03 23:58 IST
ಉಡುಪಿ, ಆ.3: ಬೆಂಕಿ ಅವಘಡದಿಂದ ಗಂಭೀರವಾಗಿ ಗಾಯಗೊಂಡಿದ್ದ ವಲಸೆ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬೀಡಿನಗುಡ್ಡೆ ಎಂಬಲ್ಲಿ ನಡೆದಿದೆ.
ಮೃತರನ್ನು ವಲಸೆ ಕಾರ್ಮಿಕ ಯಲಗುರಪ್ಪಹಾಲನ್ನನವರ ಎಂದು ಗುರುತಿಸಲಾಗಿದೆ. ಜು.28ರಂದು ಬೆಳಗ್ಗೆ ಇವರ ಪತ್ನಿ ಚಹಾ ಮಾಡಲು ಒಲೆ ಹತ್ತಿಸುತ್ತಿರುವಾಗ ಆಕಸ್ಮಿಕವಾಗಿ ಅಲ್ಲೇ ಇದ್ದ ಸೀಮೆಎಣ್ಣೆ ಕ್ಯಾನ್ ಬಿದ್ದು ಅವರ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು. ಇದರಿಂದ ಸಂಪೂರ್ಣ ಸುಟ್ಟು ಗಾಯಗೊಂಡ ಯಲಗುರಪ್ಪರನ್ನು ಉಡುಪಿ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಮಂಗಳವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.