ಕಾಸರಗೋಡು: ಆ. 9ರಿಂದ ಬ್ಯಾಂಕ್ ಅದಾಲತ್

Update: 2016-08-04 07:55 GMT

ಕಾಸರಗೋಡು, ಆ.4: ಬ್ಯಾಂಕ್ ಸಾಲ ಪಡೆದು ಕಂದಾಯ ವಸೂಲಿ ಕ್ರಮಗಳನ್ನು ಎದುರಿಸುತ್ತಿರುವವರಿಗೆ ಜಿಲ್ಲೆಯ ವಿವಿಧ ಗ್ರಾಮ ಕಚೇರಿಗಳಲ್ಲಿ ಬ್ಯಾಂಕ್ ಅಧಿಕಾರಿಗಳ ಸಹಕಾರದೊಂದಿಗೆ ಆಗಸ್ಟ್ 9ರಿಂದ ಬ್ಯಾಂಕ್ ಸಾಲ ಅದಾಲತ್ ನಡೆಯಲಿದೆ.

ಅದಾಲತ್‌ನಲ್ಲಿ ಬ್ಯಾಂಕ್ ಮ್ಯಾನೇಜರ್‌ಗಳು, ಕಂದಾಯ ಅಧಿಕಾರಿಗಳು ಭಾಗವಹಿಸಲಿದ್ದು ಗರಿಷ್ಠ ವಿನಾಯಿತಿಗಳನ್ನು ಮಂಜೂರುಗೊಳಿಸಲಾಗುವುದು. ಈ ಅವಕಾಶದ ಗರಿಷ್ಠ ಪ್ರಯೋಜನ ಪಡೆದು ಇನ್ನೂ ಪೂರ್ಣವಾಗಿ ಸಾಲ ಮರುಪಾವತಿಸದ ಎಲ್ಲರು ಜಪ್ತಿ ಪ್ರಕ್ರಿಯೆಗಳಿಂದ ಹೊರತಾಗಬೇಕಾಗಿ ಜಿಲ್ಲಾಧಿಕಾರಿ ಇ. ದೇವದಾಸನ್ ತಿಳಿಸಿದ್ದಾರೆ.

ಮಂಜೇಶ್ವರ ತಾಲೂಕಿನಲ್ಲಿ ಆ.9ರಿಂದ 23ರವರೆಗೆ ವಿವಿಧ ಕೇಂದ್ರಗಳಲ್ಲಿ ಅದಾಲತ್‌ಗಳು ನಡೆಯಲಿವೆ. ಆ.9ರಂದು ಕಡಂಬಾರು, ಕೊಡ್ಲಮೊಗರು, ವರ್ಕಾಡಿ, ಮೀಂಜ ಗ್ರಾಮದವರಿಗೆ ವರ್ಕಾಡಿ ಕೃಷಿ ಭವನದಲ್ಲಿ, 10ರಂದು ಹೊಸಬೆಟ್ಟು, ಕುಂಜತ್ತೂರು ಗ್ರಾಮದವರಿಗೆ ಹೊಸಬೆಟ್ಟು ಗ್ರಾಮ ಕಚೇರಿಯಲ್ಲಿ, 17ರಂದು ಕೊಯಿಪ್ಪಾಡಿ, ಬಂಬ್ರಾಣ ಗ್ರಾಮದವರಿಗೆ ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ, 18ರಂದು ಬಾಡೂರು, ಎಡನಾಡು ಗ್ರಾಮದವರಿಗೆ ಬಾಡೂರು ಗ್ರಾಮ ಕಚೇರಿಯಲ್ಲಿ 19ರಂದು ಎಣ್ಮಕಜೆ, ಪಡ್ರೆ, ಸೇಣಿ ಗ್ರಾಮದವರಿಗೆ ಎಣ್ಮಕಜೆ ಗ್ರಾಮ ಕಚೇರಿಯಲ್ಲಿ ಅದಾಲತ್ ನಡೆಯಲಿದೆ.

ಆ. 22ರಂದು ಉಪ್ಪಳ, ಇಚ್ಚಿಲಂಗೋಡ್, ಕಯ್ಯಿರು ಗ್ರಾಮದ ಬ್ಯಾಂಕ್ ಸಾಲಗಾರರಿಗೆ ಉಪ್ಪಳ ಗ್ರಾಮ ಕಚೇರಿಯಲ್ಲಿ, ಆ. 23ರಂದು ಬಾಯಾರು, ಪೈವಳಿಕೆ ಗ್ರಾಮದವರಿಗೆ ಪೈವಳಿಕೆ ಗ್ರಾಮ ಕಚೇರಿಯಲ್ಲಿ ಅದಾಲತ್ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News