×
Ad

ಕಾಣಿಯೂರು: ಚಲಿಸುತ್ತಿದ್ದ ಜೀಪ್ ಮೇಲೆ ಬಿದ್ದ ವಿದ್ಯುತ್ ತಂತಿಗಳು

Update: 2016-08-04 13:30 IST

ಕಡಬ, ಆ.4: ಚಲಿಸುತ್ತಿದ್ದ ಜೀಪ್ ಮೇಲೆ ವಿದ್ಯುತ್ ತಂತಿಗಳು ಬಿದ್ದ ಘಟನೆ ಕಾಣಿಯೂರು ಸಮೀಪದ ಚಾರ್ವಾಕ ಮೀಜೆ ಎಂಬಲ್ಲಿ ಗುರುವಾರ ಸಂಭವಿಸಿದೆ.

ಜೀಪಿನಲ್ಲಿ 8 ಮಂದಿ ಪ್ರಯಾಣಿಸುತ್ತಿದ್ದರು. ವಿದ್ಯುತ್ ಕಂಬವು ಮುರಿದು ಬಿದ್ದಿದ್ದರಿಂದ ವಿದ್ಯುತ್ ತಂತಿಗಳು ಜೀಪಿನ ಮೇಲೆ ಬಿದ್ದಿವೆ.

ಆ ಸಮಯದಲ್ಲಿ ವಿದ್ಯುತ್ ಇಲ್ಲದ್ದರಿಂದ ಸಂಭಾವ್ಯ ಅನಾಹುತವೊಂದು ತಪ್ಪಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News