×
Ad

ಕಾಸರಗೋಡು: ಆ.15ರಂದು ಡಿವೈಎಫ್‌ಐ ವತಿಯಿಂದ ಯುವಸಾಗರ

Update: 2016-08-04 13:35 IST

ಕಾಸರಗೋಡು, ಆ.4: ಕೋಮುವಾದಕ್ಕೆ ವಿದಾಯ ಹೇಳುವ, ಜಾತ್ಯತೀತತೆಯನ್ನು ರಕ್ಷಿಸುವ ಎಂಬ ಘೋಷಣಾವಾಕ್ಯದೊಂದಿಗೆ ಆ.15ರಂದು ಡಿವೈಎಫ್‌ಐ ಆಶ್ರಯದಲ್ಲಿ ಕಾಸರಗೋಡಿನಲ್ಲಿ ಯುವಸಾಗರ ಕಾರ್ಯಕ್ರಮ ಜರಗಲಿದೆ. ಇದರ ಪ್ರಚಾರಾರ್ಥ ಗುರುವಾರ ಬ್ಲಾಕ್‌ಮಟ್ಟದ ಕಾಲ್ನಡಿಗೆ ಪ್ರಚಾರ ಜಾಥಾಗಳು ಆರಂಭಗೊಂಡವು.

ಗುರುವಾರ ಡಿವೈಎಫ್‌ಐ ನೀಲೇಶ್ವರ ಬ್ಲಾಕ್ ಸಮಿತಿ ಜಾಥಾವನ್ನು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಶಿವಾಜಿ ವೆಳ್ಳಿಕ್ಕೋತ್, ಕಾರಡ್ಕ ಬ್ಲಾಕ್ ಜಾಥಾವನ್ನು ಡಿವೈಎಫ್‌ಐ (ಎಂ) ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ವಿ.ಪಿ.ಪಿ. ಮುಸ್ತಫಾ ಉದ್ಘಾಟಿಸಿದರು. ಆ.5ರಂದು ಎಳೇರಿ, ಪನತ್ತಡಿ ಬ್ಲಾಕ್ ಸಮಿತಿಗಳ ಜಾಥಾಗಳನ್ನು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಕೆ.ಮಣಿಕಂಠನ್, ಚೆರುವತ್ತೂರಿನ ಬ್ಲಾಕ್ ಸಮಿತಿಯ ಜಾಥಾವನ್ನು ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಕೆ.ವಿ. ಸುಮೇಶ್ ಉದ್ಘಾಟಿಸುವರು. ಮಂಜೇಶ್ವರ ಬ್ಲಾಕ್ ಸಮಿತಿಯ ಜಾಥಾವನ್ನು ವಿ.ಪಿ.ಪಿ. ಮುಸ್ತಫಾ, ಕಾಞಂಗಾಡ್ ಜಾಥಾವನ್ನು ಪಿ.ಸಂತೋಷ್ ಉದ್ಘಾಟಿಸುವರು. ಉದುಮ ಬ್ಲಾಕ್ ಸಮಿತಿಯ ಜಾಥಾವನ್ನು ಸಿಪಿಐಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ. ವಿ. ಕುಞಿರಾಮನ್, ಬೇಡಡ್ಕ ಬ್ಲಾಕ್ ಸಮಿತಿ ಜಾಥಾವನ್ನು ಶಿವಾಜಿ ವೆಳ್ಳಿಕ್ಕೋತ್ ಉದ್ಘಾಟಿಸುವರು.

ಆ.6ರಂದು ತೃಕ್ಕರಿಪುರ, ಕುಂಬಳೆ ಸಮಿತಿಗಳ ಜಾಥಾವನ್ನು ಶಿವಾಜಿ ವೆಳ್ಳಿಕ್ಕೋತ್ ಉದ್ಘಾಟಿಸುವರು. ಕಾಸರಗೋಡು ಬ್ಲಾಕ್ ಸಮಿತಿಯ ಜಾಥಾವನ್ನು ಕೆ.ಮಣಿಕಂಠನ್ ಉದ್ಘಾಟಿಸುವರು. ಅಪರಾಹ್ನ 3 ಗಂಟೆಗೆ ವಿದ್ಯಾನಗರವನ್ನು ಕೇಂದ್ರೀಕರಿಸಿ ಯುವಜನ ರ್ಯಾಲಿ ಆರಮಭವಾಗಲಿದೆ. ಸಂಜೆ 4 ಗಂಟೆಗೆ ಕಾಸರಗೋಡು ಹೊಸಬಸ್ಸು ನಿಲ್ದಾಣ ಪರಿಸರದಲ್ಲಿ ನಡೆಯುವ ಯುವಸಾಗರ ಕಾರ್ಯಕ್ರಮದಲ್ಲಿ 25,000 ಮಂದಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News