×
Ad

ಮಂಜೇಶ್ವರ: ಮುಸ್ಲಿಂ ಲೀಗ್ ಮುಖಂಡನ ಮನೆಯಲ್ಲಿ ನಿಗೂಢ ಸ್ಫೋಟ

Update: 2016-08-04 19:51 IST

ಮಂಜೇಶ್ವರ, ಆ.4: ಮುಸ್ಲಿಂ ಲೀಗ್ ಮುಖಂಡರೋರ್ವರ ಮನೆಯಲ್ಲಿ ಗುರುವಾರ ಮುಂಜಾನೆ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಮುಸ್ಲಿಂ ಲೀಗ್‌ನ ಮಾಜಿ ಜಿಲ್ಲಾ ಕಾರ್ಯದರ್ಶಿ ಬಂಬ್ರಾಣ ಕುಕ್ಕಳಂಕುನ್ನು ನಿವಾಸಿ ಕೆ.ಕೆ.ಅಬ್ದುಲ್ಲ ಕುಂಞಿಯವರ ಮನೆಯಲ್ಲಿ ಗುರುವಾರ ಮುಂಜಾನೆ 2 ಗಂಟೆ ವೇಳೆ ಸ್ಫೋಟ ಸಂಭವಿಸಿದೆ. ಅಡುಗೆ ಕೋಣೆಯಿಂದ ಸ್ಫೋಟದ ಸದ್ದುಕೇಳಿ ಬಂದಿದ್ದು ಕೂಡಲೇ ಎಚ್ಚೆತ್ತ ಅಬ್ದುಲ್ ಕುಂಞಿಯವರ ಪತ್ನಿ ಹಾಗೂ ಪುತ್ರಿ ಧಾವಿಸಿ ನೋಡಿದಾಗ ಬೆಂಕಿ ಉರಿಯುತ್ತಿರುವುದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪರಿಸರದ ನಿವಾಸಿಗಳು ಕೂಡಲೇ ಬೆಂಕಿ ನಂದಿಸಿದ್ದಾರೆ.

ಒಲೆಯಲ್ಲಿ ಬೆಂಕಿಯಿರಲಿಲ್ಲ. ಅಲ್ಲದೆ, ಅಲ್ಲಿ ಯಾವುದೇ ವಿದ್ಯುತ್ ಉಪಕರಣಗಳೂ ಇರಲಿಲ್ಲವೆಂದು ಮನೆಯವರು ತಿಳಿಸಿದ್ದಾರೆ. ಆದರೆ ಬೆಂಕಿ ಹೇಗೆ ಸೃಷ್ಟಿಯಾಯಿತು ಎನ್ನುವ ಬಗ್ಗೆ ಗೊಂದಲ ಏರ್ಪಟ್ಟಿದೆ. ಕುಂಬಳೆ ಎಸ್ಸೈ ಸೋಮಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್ ಹಾಗೂ ಡಿವೈಎಸ್ಪಿ ನೇತೃತ್ವದ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News