×
Ad

ಆತ್ಮಹತ್ಯೆಗೈದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

Update: 2016-08-04 20:33 IST

ಮಂಜೇಶ್ವರ, ಆ.4: ನೆಕ್ರಾಜೆ ಸಮೀಪದ ಈಳಂತ್ತೋಡಿ ನಿವಾಸಿ ಕೃಷ್ಣನಾಯ್ಕ(40) ಎಂಬವರ ಮೃತದೇಹವು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹದ ಕಾಲುಗಳಲ್ಲಿ ಗಾಯಗಳು ಕಂಡು ಬಂದ ಕಾರಣ ಉನ್ನತ ಮಟ್ಟದ ಶವ ಮಹಜರಿಗಾಗಿ ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಕೃಷ್ಣ ನಾಯ್ಕರು ಈಳಂತ್ತೋಡಿನಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಪತ್ನಿಯು ಮಂಗಳವಾರ ಸಂಬಂಧಿಕರ ಮನೆಗೆ ತೆರಳಿದ್ದು ಬುಧವಾರ ಮನೆ ಬಂದಾಗ ಕೃಷ್ಣ ನಾಯ್ಕರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

ಮೃತರು ಪತ್ನಿ ಮೂರು ಮಂದಿ ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News