×
Ad

ಯಾನಗಳನ್ನು ರದ್ದುಗೊಳಿಸಿಲ್ಲ: ಎಐಇ

Update: 2016-08-04 22:53 IST

ತಿರುವನಂತಪುರ,ಆ.4: ದುಬೈನಿಂದ ಕೇರಳ ಮತ್ತು ಮಂಗಳೂರಿಗೆ ತನ್ನ ಯಾವುದೇ ಯಾನವನ್ನು ರದ್ದುಗೊಳಿಸಿಲ್ಲ, ಆದರೆ ಎಮಿರೇಟ್ಸ್ ವಿಮಾನ ಅವಘಡದ ಬಳಿಕ ಈ ಯಾನಗಳನ್ನು ಶಾರ್ಜಾದ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್(ಎಐಇ) ಗುರುವಾರ ತಿಳಿಸಿತು.

 ‘ನ್ಯಾರೋ ಬಾಡಿ ವಿಮಾನ’ಗಳ ಕಾರ್ಯಾಚರಣೆಯನ್ನು ದುಬೈನಿಂದ ಶಾರ್ಜಾ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ನಸುಕಿನ ಮೂರು ಗಂಟೆಗೆ ದುಬೈ ಅಧಿಕಾರಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದುಬೈನಿಂದ ಕೇರಳಕ್ಕೆ ಬರುವವರು ವಿಮಾನವನ್ನು ಹತ್ತಲು ಶಾರ್ಜಾಕ್ಕೆ ತೆರಳುವಂತೆ ನಾವು ನಮ್ಮ ಕಾಲ್‌ಸೆಂಟರ್‌ಗಳ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಎಐಇ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದವು.
ತನ್ಮಧ್ಯೆ, ಗುರುವಾರ ಇಲ್ಲಿಂದ ದುಬೈಗೆ ಯಾವುದೇ ವಿಮಾನ ಯಾನ ರದ್ದಾಗಿಲ್ಲ ಎಂದು ತಿರುವನಂತಪುರ ವಿಮಾನ ನಿಲ್ದಾಣದ ನಿರ್ದೇಶಕ ಜಾರ್ಜ್ ಥರಕ್ಕನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News