×
Ad

ಮಹಿಳೆಯ ಬ್ಯಾಗ್‌ನಿಂದ 1.58 ಲಕ್ಷ ರೂ. ಕಳವು

Update: 2016-08-04 22:59 IST

 ಮಂಗಳೂರು, ಆ. 4: ನಗರದ ಮಂಗಳಾದೇವಿಯಿಂದ ಕಂಕನಾಡಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್‌ನಿಂದ 1.58 ಲಕ್ಷ ರೂ.ಕಸಿದಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೋಳೂರಿನ ಲೀಲಾವತಿ (64) ಹಣ ಕಳೆದುಕೊಂಡವರಾಗಿದ್ದಾರೆ. ಜುಲೈ 27ರಂದು ಇವರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಕಳವು ನಡೆದಿದ್ದು, ಅವರ ಬದಿಯಲ್ಲಿ ಬುರ್ಖಾಧಾರಿ ಮಹಿಳೆಯರಿಬ್ಬರು ಕುಳಿತಿದ್ದರು ಎಂದು ಹೇಳಲಾಗಿದೆ.

ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News