×
Ad

ಪೋಸ್ಟ್ ಮಾಸ್ಟರ್‌ನಿಂದ ಹಣ ವಂಚನೆ

Update: 2016-08-04 23:43 IST

ಬ್ರಹ್ಮಾವರ, ಆ.4: ಹಾವಂಜೆ ಅಂಚೆ ಶಾಖೆಯ ಪೋಸ್ಟ್ ಮಾಸ್ಟರ್ ಖಾತೆದಾರರ ಹಣವನ್ನು ಸ್ವಂತ ಉಪಯೋಗಕ್ಕೆ ಬಳಸಿ ವಂಚಿಸಿರುವ ಘಟನೆ ವರದಿಯಾಗಿದೆ. 1997ರಿಂದ ಹಾವಂಜೆಯಲ್ಲಿ ಶಾಖಾ ಪೋಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಘವೇಂದ್ರ ಶೆಟ್ಟಿ ಎಂಬವರು, ಅಂಚೆ ಕಚೇರಿಯಲ್ಲಿ ತೆರೆಯಲಾದ ಕೃಷ್ಣ ನಾಯ್ಕ ಎಂಬವರ ಎಸ್‌ಬಿ ಖಾತೆಯ 9,800ರೂ.ಗಳನ್ನು, 2013ರ ಮಾ.26ರಿಂದ ಮೇ27ರ ಮಧ್ಯೆ, ಸತೀಶ್ ನಾಯ್ಕ ಎಂಬವರ ಎಸ್‌ಬಿ ಖಾತೆಯ 2,500ರೂ., 2012ರ ಅ.9ರಿಂದ 2013ರ ಆ.20ರ ಮಧ್ಯೆ ಜಯಕರ ದಾಸ್ ಎಂಬವರ ಎಸ್‌ಬಿ ಖಾತೆಗೆ ಜಮೆ ಮಾಡಿದ 4,300ರೂ., ಹಣವನ್ನು ಖಾತೆದಾರರ ನಕಲಿ ಸಹಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣವನ್ನು ಪಡೆದು ಸ್ವಂತಕ್ಕೆ ಉಪಯೋಗಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ದೂರಲಾಗಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News