×
Ad

ಸುನ್ನಿ ಜಂಇಯ್ಯುತುಲ್ ಮುಅಲ್ಲಿಂ ದೇರಳಕಟ್ಟೆ ರೇಂಜ್‌ನ ವಾರ್ಷಿಕ ಮಹಾ ಸಭೆ

Update: 2016-08-04 23:44 IST

ಉಳ್ಳಾಲ, ಆ.4: ಸುನ್ನಿ ಜಂಇಯ್ಯುತುಲ್ ಮುಅಲ್ಲಿಂ ದೇರಳಕಟ್ಟೆ ರೇಂಜ್ ಇದರ ವಾರ್ಷಿಕ ಮಹಾ ಸಭೆಯು ಇತ್ತಿಚೆಗೆ ಮುಪತ್ತಿಸ್ ಅಬ್ದುಲ್ ಹಮೀದ್ ಮದನಿ ಅಧ್ಯಕ್ಷತೆಯಲ್ಲಿ ದೇರಳಕಟ್ಟೆ ತಾಜುಲ್ ಉಲಮಾ ಸುನ್ನಿ ಸೆಂಟರ್‌ನಲ್ಲಿ ನಡೆಯಿತು.

ಹಸನ್ ಸಖಾಫಿ ದುಆ ನೆರವೇರಿಸಿದರು. ಇಸ್ಮಾಯಿಲ್ ಸಅದಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಸ್ಮಾಯೀಲ್ ಸಅದಿ, ಜನರಲ್ ಕಾರ್ಯದರ್ಶಿಯಾಗಿ ಹಂಝ ಅಝ್‌ಹರಿ, ಕೋಶಾಧಿಕಾರಿ ಹನೀಫ್ ಸಅದಿ, ಪರೀಕ್ಷಾ ವಿಭಾಗ ಕಾರ್ಯದರ್ಶಿಯಾಗಿ ಹನೀಫ್ ಮುಸ್ಲಿಯಾರ್, ಮೆಗಝಿನ್ ಕಾರ್ಯದರ್ಶಿಯಾಗಿ ಆಶ್ರಫ್ ಇಂದಾದಿ, ಮಿಶನರಿ ವಿಭಾಗ ಕಾರ್ಯದರ್ಶಿಯಾಗಿ ಅಝೀಝ್ ಸಅದಿ, ತರಬೇತಿ ಕಾರ್ಯದರ್ಶಿಯಾಗಿ ಶರೀಫ್ ಸಅದಿ, ವೆಲ್ಫೇರ್ ಕಾರ್ಯದರ್ಶಿಯಾಗಿ ಸಿದ್ದೀಕ್ ಮದನಿ, ಎಸ್‌ಬಿಎಸ್ ಕಾರ್ಯದರ್ಶಿಯಾಗಿ ನಝೀರ್ ಸಖಾಫಿ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಮದನಿ, ಉಮರ್ ಮದನಿ, ಮಹಮ್ಮದ್ ಸಖಾಫಿ, ಹನೀಪ್ ಸಅದಿ ಮಲಾರ್, ಉಮರ್ ಸಅದಿ ಆಯ್ಕೆಯಾದರು. ಕಾರ್ಯದರ್ಶಿ ಹಂಝ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News