×
Ad

ರೈಲಿನಲ್ಲಿ ಗೋವಾ ಮದ್ಯ ವಶ

Update: 2016-08-04 23:46 IST

ಉಡುಪಿ, ಆ.4: ಕಾರವಾರ ರೈಲ್ವೆ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಾವಿರಾರು ರೂ. ವೌಲ್ಯದ ಗೋವಾ ಮದ್ಯವನ್ನು ರೈಲ್ವೆ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಕುರ್ಲಾ-ಮಂಗಳೂರು ಮತ್ಸಗಂಧ ರೈಲನ್ನು ಪರಿಶೀಲಿಸಿದಾಗ ನಾಲ್ಕು ವಾರಸುದಾರರಿಲ್ಲದ ಬ್ಯಾಗ್‌ಗಳು ಪತ್ತೆಯಾಗಿದ್ದು, ಇದರಲ್ಲಿದ್ದ ಸುಮಾರು 12,720ರೂ. ವೌಲ್ಯದ 245 ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸೊತ್ತುಗಳನ್ನು ಕಾರವಾರ ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News