ಅಸ್ಸಾಂನಲ್ಲಿ ಉಗ್ರಗಾಮಿಗಳ ಅಟ್ಟಹಾಸ: 12 ಮಂದಿ ಸಾವು
Update: 2016-08-05 14:40 IST
ಅಸ್ಸಾಂ, ಆ.5: ಇಲ್ಲಿನ ಕೋಕ್ರಝಾರ್‌ನ ಮಾರುಕಟ್ಟೆ ಪ್ರದೇಶದಲ್ಲಿ ಉಗ್ರಗಾಮಿಗಳು ನಡೆಸಿರುವ ಗುಂಡಿನ ದಾಳಿಯಲ್ಲಿ 12 ಅಮಾಯಕ ಜನರು ಸಾವನ್ನಪ್ಪಿದ್ದು, 30 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ದಾಳಿಕೋರರನ್ನು ಬೋಡೊ ಉಗ್ರರೆಂದು ಶಂಕಿಸಲಾಗಿದೆ. ಇತ್ತೀಚೆಗಷ್ಟೇ ಬೋಡೋ ಉಗ್ರರು ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ಘಟಕಕ್ಕೆ(ಎನ್‌ಐಎ)ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ದಾಳಿ ನಿರೀಕ್ಷಿತವಾಗಿತ್ತು.
ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಉಗ್ರನಿಂದ ಎಕೆ-47ನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಉಗ್ರರಿಗಾಗಿ ಹುಡುಕಾಟ ಮುಂದುವರಿದಿದೆ.
ಆಟೋರಿಕ್ಷಾದಲ್ಲಿ ಮಾರುಟ್ಟೆಯೊಳಗೆ ಪ್ರವೇಶಿಸಿದ್ದ ಐದರಿಂದ ಏಳು ಮಂದಿಯಿದ್ದ ಉಗ್ರಗಾಮಿಗಳ ತಂಡ ಗುಂಡಿನ ದಾಳಿ ನಡೆಸಿದೆ. ಮೂರು ಅಂಗಡಿಗಳ ಮೇಲೆ ಗ್ರೆನೇಡ್‌ಗಳನ್ನು ಎಸೆದಿದ್ದಾರೆ. .