ನಿತಿನ್ ಪಟೇಲ್ ಗುಜರಾತ್ ನ ಹೊಸ ಮುಖ್ಯಮಂತ್ರಿ ?

Update: 2016-08-05 10:22 GMT

ಅಹ್ಮದಾಬಾದ್, ಆ.5: ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿಹಿರಿಯ ನಾಯಕ ಹಾಗೂ ಪ್ರಸಕ್ತ ಆರೋಗ್ಯ ಸಚಿವರಾಗಿರುವ ನಿತಿನ್ ಪಟೇಲ್‌ಆಯ್ಕೆಯಾಗಲಿದ್ದಾರೆಂದು ಜನತಾ ಕಾ ರಿಪೋರ್ರ್ ವರದಿಯೊಂದು ತಿಳಿಸಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇಂದು ಗಾಂದಿ ನಗರದಲ್ಲಿ ನಡೆಯಲಿರುವ ಬಿಜೆಪಿ ಶಾಸಕರ ಸಭೆಯಲ್ಲಿಹೊರ ಬೀಳಲಿದೆಯೆಂದು ಹೇಳಲಾಗಿದೆ.

ಈಗಾಗಲೇ ಕೇಂದ್ರದ ವೀಕ್ಷಕರಾದ ನಿತಿನ್ ಗಡ್ಕರಿ ಹಾಗೂ ಸರೋಜ್ ಪಾಂಡೆ ಗುಜರಾತ್ ನಲ್ಲಿದ್ದು, ಇಂದು ನಡೆಯಲಿರುವ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಭಾಗವಹಿಸಲಿದ್ದಾರೆ. ಶಾ ಈಗಾಗಲೇ ಹೊಸ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿರಾಜ್ಯದ ಎಲ್ಲಾ ಪ್ರಮುಖ ನಾಯಕರು ಹಾಗೂ ಪಕ್ಷದ ಶಾಸಕರ ಸಲಹೆ ಕೇಳಿದ್ದಾರೆ.
ಉತ್ತರ ಗುಜರಾತ್ ನವರಾದ ನಿತಿನ್ ಪಟೇಲ್90ರ ದಶಕದಿಂದ ಸತತವಾಗಿ ಸಚಿವರಾಗಿ ಸೇವೆ ಸಲ್ಲಿಸಿದವರು. ಅವರು ಈ ತನಕ ಕೇವಲ ಒಂದೇ ಬಾರಿ, 2000ರ ಅಸೆಂಬ್ಲಿ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದಾರೆ. ರಾಜ್ಯದಲ್ಲಿ ನರೇಂದ್ರ ಮೋದಿ ಸರಕಾರವಿದ್ದಾಗ ನಿತಿನ್ ಪಟೇಲ್‌ನಗರಾಭಿವೃದ್ಧಿ ಹಾಗೂ ವಿತ್ತ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅವರು ಪ್ರಸಕ್ತ ಗುಜರಾತ್ ಕ್ಯಾಬಿನೆಟ್ ನ ನಂ.2 ಸಚಿವರಾಗಿದ್ದು ಆನಂದಿ ಬೆನ್ ಸರಕಾರದ ವಕ್ತಾರರೂ ಆಗಿದ್ದಾರಲ್ಲದೆಮಾಧ್ಯಮ ಸ್ನೇಹಿ ಸಚಿವರೆಂದೂ ಕರೆಸಿಕೊಂಡಿದ್ದಾರೆ.
ಆನಂದಿಬೆನ್ ಅವರಂತೆಯೇ ಪಟೇಲ್ ನಾಯಕರಾಗಿರುವ ನಿತಿನ್ ಅವರುಕಳೆದ ವರ್ಷ ಗುಜರಾತ್ ನಲ್ಲಿ ಪಟೇಲ್ ಚಳುವಳಿ ತೀವ್ರ ಸ್ವರೂಪ ಪಡೆದುಕೊಂಡ ನಂತರ ಸರಕಾರಪಟೇಲ್ ಸಮುದಾಯದ ಬೇಡಿಕೆಗಳನ್ನು ಪರಿಗಣಿಸಲು ಹಾಗೂ ಪ್ರತಿಭಟನಾಕಾರರ ನಾಯಕರೊಂದಿಗೆ ಮಾತುಕತೆ ನಡೆಸಲು ರಚಿಸಿದ್ದ ಸಮಿತಿಯ ಪ್ರಮುಖರೂ ಆಗಿದ್ದರು. ಅವರು ಆನಂದಿ ಬೆನ್ ಹಾಗೂಅಮಿತ್ ಶಾ ಗೆ ತುಂಬಾ ಹತ್ತಿರದವರೆಂದು ಹೇಳಲಾಗುತ್ತಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿಯ ಆಶೀರ್ವಾದವೂ ಇದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News