ಬೇಕೂರು ಶಾಲಾ ಕಟ್ಟಡ ಕುಸಿತ
Update: 2016-08-05 17:59 IST
ಮಂಜೇಶ್ವರ, ಆ.5: ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕಟ್ಟಡವೊಂದು ಭಾಗಶಃ ಕುಸಿದು ಬಿದ್ದಿದೆ. ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಶಾಲೆ ಕುಸಿದು ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.
ಶಾಲೆಯ ಸೈನ್ಸ್ ಲ್ಯಾಬ್, ಲೈಬ್ರೆರಿ ಮತ್ತು ಸ್ಟಾಫ್‌ರೂಂಗಳನ್ನು ಒಳಗೊಂಡ ಕಟ್ಟಡ ಕುಸಿದು ಬಿದ್ದಿದೆ. ಪಕ್ಕಾಸು ಮುರಿದು ಛಾವಣಿ ಕುಸಿದು ಬಿದ್ದು ಹೆಂಚುಗಳು ಪುಡಿಗೈಯ್ಯಲ್ಪಟ್ಟಿದೆ. ಸುಮಾರು 75,000 ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ರಾತ್ರಿ ಹೊತ್ತಿನಲ್ಲಿ ಅವಘಡ ಸಂಭವಿಸಿದ್ದರಿಂದ ಭಾರೀ ಅಪಾಯ ತಪ್ಪಿದಂತಾಗಿದೆ.