×
Ad

ಕಬಕ: ಲಾರಿಗೆ ಬೈಕ್ ಢಿಕ್ಕಿ; ಸವಾರನಿಗೆ ಗಾಯ

Update: 2016-08-05 19:02 IST

ಪುತ್ತೂರು, ಆ.5: ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ಮಾಣಿ ಮೈಸೂರು ಹೆದ್ದಾರಿಯಲ್ಲಿ ಲಾರಿಗೆ ಬೈಕೊಂದು ಢಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.

ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಪೆರಿಯಡ್ಕ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಅಶ್ರಪ್ (32) ಗಾಯಗೊಂಡವರು.

ಪುತ್ತೂರಿನಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಚಾಲಕ ಪೋಳ್ಯ ಸಮೀಪ ಅಳವಡಿಸಲಾಗಿದ್ದ ಬ್ಯಾರಿಕೇಡ್ ಬಳಿ ನಿಧಾನಗತಿಗೆ ತಂದ ವೇಳೆ ಹಿಂದಿನಿಂದ ಅಶ್ರಫ್ ಚಲಾಯಿಸಿಕೊಂಡು ಹೋಗುತ್ತಿದ್ದ ಬುಲೆಟ್ ಢಿಕ್ಕಿ ಹೊಡೆಯಿತೆಂದು ತಿಳಿದು ಬಂದಿದೆ.

ಗಾಯಾಳು ಅಶ್ರಫ್‌ರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News