×
Ad

ಕೊಲ್ಯ: ಕಾರು ಢಿಕ್ಕಿಯಾಗಿ ಪಾದಚಾರಿ ಮಹಿಳೆಗೆ ಗಾಯ

Update: 2016-08-05 19:22 IST

ಉಳ್ಳಾಲ, ಆ.5: ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಬೈಪಾಸ್ ಎಂಬಲ್ಲಿ ರಸ್ತೆ ದಾಟುತ್ತಿದ್ದ ವೃದ್ಧೆಯೋರ್ವರಿಗೆೆ ಮಿತಿ ಮೀರಿದ ವೇಗದೊಂದಿಗೆ ಬರುತ್ತಿದ್ದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಕುಂಪಲ, ಬಾರ್ದೆ ನಿವಾಸಿ ಜಯಂತಿ (70)ಎಂಬವರೇ ಗಾಯಗೊಂಡು ಕಾಲು ಮುರಿತಕ್ಕೊಳಗಾದ ವೃದ್ಧೆ. ಅವರು ರಸ್ತೆ ದಾಟುತ್ತಿದ್ದ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಮಿತಿಮೀರಿದ ವೇಗದಲ್ಲಿ ಚಲಿಸುತ್ತಿದ್ದ ಸ್ವಿಪ್ಟ್(ಕೆಎಲ್14 ಎಸ್ 896) ಕಾರು ಹೊಡೆದ ಪರಿಣಾಮ ಜಯಂತಿಯವರ ಬಲ ಕಾಲು ಮುರಿದಿದ್ದು ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಢಿಕ್ಕಿ ಹೊಡೆದ ಕಾರನ್ನು ಸ್ಥಳೀಯರು ನಿಲ್ಲಿಸಿದ್ದು ಚಾಲಕನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿತಿಮೀರಿದ ವೇಗದೊಂದಿಗೆ ಕೇರಳಕ್ಕೆ ಸಂಚರಿಸುವ ವಾಹನಗಳಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು ನಾಗರಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News