ತೊಕ್ಕೊಟ್ಟು: ಕೊರಗತನಿಯ ದೈವಸ್ಥಾನ,ಬಾಂಬೆ ಬಝಾರ್‌ನಲ್ಲಿ ಕಳವು
Update: 2016-08-05 21:04 IST
ಉಳ್ಳಾಲ, ಆ.5: ತೊಕ್ಕೊಟ್ಟಿನ ಬಾಂಬೆ ಬಝಾರ್ ವಸ್ತ್ರಮಳಿಗೆ ಮತ್ತು ಅಬ್ಬಂಜರದ ಕೊರಗತನಿಯ ದೈವಸ್ಥಾನಕ್ಕೆ ಗುರುವಾರ ರಾತ್ರಿ ಅಪರಿಚಿತ ಕಳ್ಳರು ನುಗ್ಗಿ ನಗದು ಹಾಗೂ ಬಟ್ಟೆಗಳನ್ನು ಕಳವುಗೈದು ಪರಾರಿಯಾಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಬ್ಬಂಜರದಲ್ಲಿರುವ ಕೊರಗತನಿಯ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಹುಂಡಿಯಲ್ಲಿದ್ದ ಕಾಣಿಕೆ ಹಣವನ್ನು ಕಳವು ಮಾಡಿದ್ದಾರೆ. ತೊಕ್ಕೊಟ್ಟಿನಲ್ಲಿ ಡೇರೆ ಹಾಕಿ ವಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ ಬಾಂಬೆ ಬಝಾರ್‌ಗೆ ನುಗ್ಗಿ ಒಂದು ಸಾವಿರ ರೂ. ನಗದು ಮತ್ತು ಬೆಲೆಬಾಳುವ ಬಟ್ಟೆಗಳನ್ನು ಕದ್ದೊಯಿದ್ದಾರೆ ಎಂದು ದೂರು ನೀಡಲಾಗಿದೆ.
ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.