‘ಮಾಸುನ್’ ಟೈಲ್ಸ್ ಮತ್ತು ಗ್ರಾನೈಟ್ಸ್ ನೂತನ ಶೋ ರೂಂ ಶುಭಾರಂಭ
ಮಂಗಳೂರು, ಆ.5: ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನ ‘ಮಾಸುನ್’ ಟೈಲ್ಸ್ ಮತ್ತು ಗ್ರಾನೈಟ್ಸ್ ಫ್ಯಾಕ್ಟರಿ ಔಟ್‌ಲೆಟ್ ಇಂದು ಶುಭಾರಂಭಗೊಂಡಿತು.
ಅಬ್ದುರ್ರಝಾಕ್ ಮೊಯ್ದಿನ್ ನೂತನ ಶೋ ರೂಂನ ಉದ್ಘಾಟನೆ ನೆರವೇರಿಸಿದರು. ಮಾಸುನ್ ಮುನೀರ್ ಮತ್ತು ಮಿಸ್ಬಾಹ್ ಮುನೀರ್ ಕಚೇರಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಜೆ.ಸುರೇಂದರ್, ಎಸಿಸಿಇ(ಐ) ಇದರ ಅಧ್ಯಕ್ಷ ಟಿ.ವಿನಾಯಕ ಪೈ, ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಗ್ರೂಪ್4 ಸ್ಯಾನಿಟರಿ ಮಂಗಳೂರು ಇದರ ಅಬೂಬಕರ್ ಸಿದ್ದೀಕ್, ಮಯೂರ್ ಬಿಲ್ಡರ್ಸ್‌ನ ಸುದೇಶ್ ಕುಮಾರ್, ಪೂನಂ ಬಿಲ್ಡರ್ಸ್‌ನ ದಾಮೋದರ ಶೆಣೈ, ಹಾಜಿ ಆ್ಯಂಡ್ ಕಂಪೆನಿಯ ಅಬ್ದುಲ್ಲಾಹ್ ಬಿ., ಬಜ್ಪೆ ಸೂಪರ್ ಬಝಾರ್‌ನ ಇಫ್ತಿಕಾರ್ ಅಹ್ಮದ್, ವಿಶ್ವಾಸ್ ಬಾವ ಬಿಲ್ಡರ್ಸ್‌ನ ರವೂಫ್ ಪುತ್ತಿಗೆ, ಪ್ರೆಸಿಡೆನ್ಸಿ ಬಿಲ್ಡರ್ಸ್‌ನ ಹೈದರ್ ಅಲಿ ಕೆ., ಸ್ಪೇಸ್ ಬಿಲ್ಡರ್ಸ್‌ನ ಲೂಯಿಸ್ ಪಿಂಟೊ, ಮುನೀರ್ ಮೊದಿನ್ ಉಚ್ಚಿಲ, ಜಾವಿದ್ ಉಚ್ಚಿಲ, ಟಿಂಬರ್ ಲ್ಯಾಂಡ್‌ನ ಬಶೀರ್ ಅಹ್ಮದ್, ಎಸ್.ಟಿ.ಟಿಂಬರ್‌ನ ನಝೀರ್ ಅಹ್ಮದ್, ಅಲ್ತಾಫ್ ಅಹ್ಮದ್, ಯು.ಕೆ.ಖಾಲಿದ್, ನ್ಯಾಯವಾದಿ ಮುಖ್ತಾರ್, ಹನೀಫ್ ಸೌದಿ ಅರೇಬಿಯಾ, ತೌಹೀದ್ ಗಾರ್ಮೆಂಟ್ಸ್‌ನ ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.
ನೂತನ ಶೋರೂಂನಲ್ಲಿ ವಿವಿಧ ಬಗೆಯ ಟೈಲ್ಸ್, ಗ್ರಾನೈಟ್ಸ್, ಕಿಚನ್ ಆಕ್ಸೆಸ್ಸರೀಸ್, ಬಾತ್‌ರೂಂ ಸಾಮಗ್ರಿಗಳು, ಸಿಂಕ್ ಸಹಿತ ಮನೆಗಳ ಅಗತ್ಯ ಸಾಮಗ್ರಿಗಳ ಅಪಾರ ಸಂಗ್ರಹವನ್ನು ಹೊಂದಿದೆ. ಓಯಸಿಸ್, ಸಿಗ್ನೋವಾ, ಹಿಂಡ್‌ವೇರ್, ಸಿಟಿ ಟೈಲ್ಸ್, ಪ್ಯಾರಿವೇರ್, ಜಾಲ್, ಜಾನ್ಸನ್, ಸೋಮನಿ, ಎಜಿಟಿ ಮೊದಲಾದ ಬ್ರಾಂಡ್‌ಗಳ ಸಾಮಗ್ರಿಗಳು ಲಭ್ಯವಿದೆ.