×
Ad

ಅಳೇಕಲ: ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

Update: 2016-08-05 21:35 IST

ಉಳ್ಳಾಲ, ಆ.5: ಎಸ್‌ವೈಎಸ್, ಎಸ್ಸೆಸ್ಸೆಫ್ ಹಾಗೂ ಎಸ್‌ವಿಎಸ್ ಅಳೇಕಲದ ಜಂಟಿ ಆಶ್ರಯದಲ್ಲಿ ಅಳೇಕಲ ಕರಿಯದಿಂದ ಪವಿತ್ರ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಅಳೇಕಲದ ಸುನ್ನಿ ಸೆಂಟರ್‌ನಲ್ಲಿ ಎಸ್‌ವೈಎಸ್ ಅಧ್ಯಕ್ಷ ಸಯ್ಯದ್ ಜಲಾಲುದ್ದೀನ್ ತಂಙಳ್‌ರ ಅಧ್ಯಕ್ಷತೆಯಲ್ಲಿ ಜರಗಿತು.

ಸೌದಿ ಅರೇಬಿಯದ ಇಮಾಮ್ ನವವೀ ಮದ್ರಸ ಅಧ್ಯಾಪಕ ಹನೀಫ್ ಸಹದಿ ಅಲ್-ಅಫ್ಳಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹಜ್ ಯಾತ್ರೆ ಕೈಗೊಂಡು ಸಯ್ಯದ್ ಮದನಿದರ್ಗಾ ಸಮಿತಿ ಸದಸ್ಯರಾದ ಫಾರೂಕ್ ಮಾರ್ಗತಲೆ, ಯು.ಕೆ. ಹನೀಫ್ ಮಾರ್ಗತಲೆ, ಎಸ್‌ವೈಎಸ್ ಅಳೇಕಲ ಬ್ರಾಂಚ್ ಕಾರ್ಯದರ್ಶಿ ಯು.ಕೆ.ಖಾದರ್, ಯು.ಕೆ.ಅಹಮ್ಮದ್ ಬಾವಾರನ್ನು ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಯ್ಯದ್‌ಖುಬೈಬ್ ತಂಙಳ್‌ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಇದೇ ಸಂದರ್ಭದಲ್ಲಿ ದರ್ಗಾ ಸಮಿತಿ ಸದಸ್ಯರಾದ ಸೈಯದ್ ಝಿಯಾದ್ ತಂಙಳ್, ಅಶ್ರಫ್ ಯು.ಡಿ., ಅಬ್ದುರ್ರವೂಫ್ ಹಾಜಿ ಅಳೇಕಲ, ಹಾಗೂ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಅಮೀನ್ ರಿಲೀಫ್ ಫೌಂಡೇಶನ್‌ನ ಚೇರ್‌ಮ್ಯಾನ್, ಮನ್ಸೂರ್ ಹಳೇಕೋಟೆ, ಫಾರೂಕ್ ಯು.ಡಿ, ಬಶೀರ್ ಅಳೇಕಲ ಸೇರಿದಂತೆ ಹಲವಾರು ಸುನ್ನೀ ಕಾರ್ಯಕರ್ತರು ಹಾಜರಿದ್ದರು.

ಫಾಝಿಲ್ ಅಳೇಕಲ ಸ್ವಾಗತಿಸಿ ಜಾಫರ್ ಯು.ಎಸ್ ಧನ್ಯವಾದಗೈದರು. ಅನ್ಸಾರ್ ಅಳೇಕಲ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News