7.5 ಕೋಟಿ ರೂ. ಬೆಲೆಬಾಳುವ ವಾಚ್ ದರೋಡೆ: ಸೌದಿ ರಾಜಕುಮಾರಿ ದೂರು
Update: 2016-08-05 22:51 IST
ಪ್ಯಾರಿಸ್, ಆ. 5: ಮಧ್ಯ ಪ್ಯಾರಿಸ್‌ನಲ್ಲಿ ತನ್ನ ಮೇಲೆ ಹಲ್ಲೆ ನಡೆಸಿ 1.1 ಮಿಲಿಯ ಡಾಲರ್ (ಸುಮಾರು 7.5 ಕೋಟಿ ರೂಪಾಯಿ) ವೌಲ್ಯದ ಕೈಗಡಿಯಾರವೊಂದನ್ನು ಇಬ್ಬರು ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ ಎಂದು ಸೌದಿ ಅರೇಬಿಯದ ರಾಜಕುಮಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಫ್ರಾನ್ಸ್ ರಾಜಧಾನಿಯಲ್ಲಿ ಗುರುವಾರ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ದಾಳಿ ನಡೆಸಿ ತನ್ನ ಅತ್ಯಂತ ಬೆಲೆಬಾಳುವ ಸ್ವಿಸ್ ಬ್ರಾಂಡ್ ರಿಚರ್ಡ್ ಮಿಲ್ ವಾಚನ್ನು ಕಸಿದು ಪರಾರಿಯಾದರು ಎಂದು ಅವರು ಹೇಳಿದ್ದಾರೆ.
ವಿಶೇಷ ಪೊಲೀಸ್ ತಂಡವೊಂದು ದರೋಡೆಯ ಬಗ್ಗೆ ತನಿಖೆ ನಡೆಸುತ್ತಿದೆ.