ಮನೆಗೆ ನುಗ್ಗಿ ಕಳವು
Update: 2016-08-05 23:28 IST
ಕಾರ್ಕಳ, ಆ.5: ಇಲ್ಲಿನ ಕಸಬ ಗ್ರಾಮ ಮಹಾಲಕ್ಷ್ಮೀನಗರದ ಸಚ್ಚಿದಾನಂದ ಕೃಪಾ ಎಂಬ ಮನೆಗೆ ನುಗ್ಗಿದ ಕಳ್ಳರು ಸುಮಾರು 1.30 ಲಕ್ಷ ರೂ.ವೌಲ್ಯದ ಚಿನ್ನ-ಬೆಳ್ಳಿ ಆಭರಣ, ಸೊತ್ತು ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿದೆ. ಜು.21ರಿಂದ ಆ.4ರ ನಡುವಿನ ಅವಧಿಯಲ್ಲಿ ಮನೆಯ ಮುಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನ ಬೀಗ ಮುರಿದು ಅದರೊಳಗಿದ್ದ ಬೆಳ್ಳಿಸರ-2, 6 ಗ್ರಾಂನಚಿನ್ನದ ತುಂಡು, ಒಂದು ಜೊತೆ ಬೆಳ್ಳಿ ಕಾಲುಚೈನ್, ಎರಡು ಪವನ್‌ನ ಚಿನ್ನದ ಕರಿಮಣಿ ಸರ, ಒಂದು ಪವನ್ ಚಕ್ರಸರ, 4ಗ್ರಾಂನ ಚಿನ್ನದ ಉಂಗುರ, 6 ಗ್ರಾಂ ತೂಕದ ಚಿನ್ನದ ಪೆಂಡೆಂಟ್ 3, 8ಗ್ರಾಂ ತೂಕದ ಬೆಳ್ಳಿ ದೀಪ, 20ಗ್ರಾಂನ ಬೆಳ್ಳಿ ಪಂಚಪಾತ್ರೆ, ಸಣ್ಣ ಬೆಳ್ಳಿ ಕರಡಿಗೆ, ಬಟ್ಟಲು10, 10ಗ್ರಾಂ ತೂಕದ ಬೆಳ್ಳಿ ನಾಣ್ಯ 5 ಹಾಗೂ 20,000ರೂ. ನಗದು ಕಳವು ಮಾಡಿಕೊಂಡು ಹೋಗಿರುವುದಾಗಿ ಪದ್ಮಾವತಿ ಎಂಬವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.