ಪ್ರತ್ಯೇಕ ಪ್ರಕರಣ ಇಬ್ಬರ ಆತ್ಮಹತ್ಯೆ
Update: 2016-08-05 23:31 IST
ಕೋಟ, ಆ.5: ಕೋಟ ವಿವೇಕ ಪದವಿ ಪೂರ್ವ ಕಾಲೇಜು ಬಳಿಯ ಚಿತ್ರಪಾಡಿ ಗ್ರಾಮದ ನಿವಾಸಿ ಗೋಪಾಲಕೃಷ್ಣ ಸೋಮಯಾಜಿ ಎಂಬವರು ಶುಕ್ರವಾರ ಬೆಳಗ್ಗೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ: ನಗರದ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತಿದ್ದ ಉದ್ಯಾವರ ಆಯುರ್ವೇದಿಕ್ ಆಸ್ಪತ್ರೆ ಬಳಿಯ ನಿವಾಸಿ ಅಚ್ಚಣ್ಣ ಪೂಜಾರಿ (72) ಎಂಬವರು ಶುಕ್ರವಾರ ಮಧ್ಯಾಹ್ನ ಆಸ್ಪತ್ರೆ ಕೋಣೆಯ ಫ್ಯಾನಿಗೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.