×
Ad

ಕಾರು ಢಿಕ್ಕಿ: ಬೈಕ್ ಸವಾರನಿಗೆ ಗಾಯ

Update: 2016-08-05 23:32 IST

ಉಪ್ಪಿನಂಗಡಿ, ಆ.5: ಬೈಕ್‌ಗೆ ಕಾರೊಂದು ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಗೋಳಿತೊಟ್ಟುವಿನಲ್ಲಿ ಗುರುವಾರ ನಡೆದಿದೆ.
ಗಾಯಗೊಂಡ ವ್ಯಕಿಯನ್ನು ಕೊಕ್ಕಡದ ಹಳ್ಳಿಂಗೇರಿ ನಿವಾಸಿ ಮುತ್ತಪ್ಪ(45) ಎಂದು ಗುರುತಿಸಲಾಗಿದೆ. ಅವರು ಆಲಂತಾಯ ಸಂಪರ್ಕ ರಸ್ತೆಯಿಂದ ಗೋಳಿತೊಟ್ಟು ಬಳಿ ರಾಷ್ಟ್ರೀಯ ಹೆದ್ದಾರಿಗೆ ಬೈಕ್‌ನಲ್ಲಿ ಬರುತ್ತಿದ್ದ ಸಂದಭರ್, ನೆಲ್ಯಾಡಿ ಕಡೆಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಅಪಘಾತದಿಂದ ರಸ್ತೆಗೆಸೆಯಲ್ಪಟ್ಟ ಇವರ ತಲೆಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಬೈಕ್ ನಜ್ಜು ಗುಜ್ಜಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News