ನಿಧನ
Update: 2016-08-05 23:34 IST
ಕೂಸಪ್ಪಗೌಡ ಓರಾಲು
ಬೆಳ್ತಂಗಡಿ, ಆ.5: ಉಜಿರೆ ಗ್ರಾಪಂ ಸದಸ್ಯ ಕೂಸಪ್ಪಗೌಡ ಓರಾಲು (65)ಎಂಬವರು ಹೃದಯಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಇವರು ಉಜಿರೆ ಗ್ರಾಪಂನ ಹಿರಿಯ ಸದಸ್ಯರಾಗಿದ್ದು 5 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಉಜಿರೆಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರೂ ಆಗಿದ್ದರು. ಬೆಳಾಲು ಮಾಚಾರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಇವರು ಪತ್ನಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.