×
Ad

ಕೇರಳ ಸಚಿವನ ಸೌದಿ ಭೇಟಿ: ರಾಜತಾಂತ್ರಿಕ ಪಾಸ್‌ಪೋರ್ಟ್ ನಿರಾಕರಿಸಿದ ಕೇಂದ್ರ ಸರಕಾರ

Update: 2016-08-05 23:37 IST

 ಹೊಸದಿಲ್ಲಿ, ಆ.5: ಸೌದಿ ಅರೇಬಿಯಾದಲ್ಲಿ ಉದ್ಯೋಗಗಳನ್ನು ಕಳೆದುಕೊಂಡು ಕಾರ್ಮಿಕ ಶಿಬಿರಗಳಲ್ಲಿ ಕೊಳೆಯುತ್ತಿರುವ ಕೇರಳೀಯರ ಸ್ಥಿತಿಯ ಪರಿಶೀಲನೆಗಾಗಿ ಆ ರಾಷ್ಟ್ರಕ್ಕೆ ಭೇಟಿಗಾಗಿ ನಿಯೋಜಿಸಲಾದ ಕೇರಳದ ಪ್ರವಾಸೋದ್ಯಮ ಸಚಿವ ಕೆ.ಟಿ.ಜಲೀಲ್ ಅವರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಲು ಕೇಂದ್ರ ಸರಕಾರವು ನಿರಾಕರಿಸಿದೆ. ಇದರಿಂದಾಗಿ ಅವರ ಸೌದಿ ಭೇಟಿಯು ನನೆಗುದಿಗೆ ಸಿಲುಕಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಲೀಲ್, ಪಾಸ್‌ಪೋರ್ಟ್ ನಿರಾಕರಣೆಗೆ ಯಾವುದೇ ಕಾರಣವನ್ನು ನೀಡಲಾಗಿಲ್ಲ. ಇದರಲ್ಲಿ ಏನಾದರೂ ರಾಜಕೀಯವಿದೆಯೇ ಎನ್ನುವುದು ಗೊತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ವಿಷಯದಲ್ಲಿ ಕೇಂದ್ರ ಸರಕಾರದೊಂದಿಗೆ ಯಾವುದೇ ಸಂಘರ್ಷಕ್ಕಿಳಿಯಲು ತಾನು ಬಯಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News