ಕಾಸರಗೋಡು: ಸರಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನಿಂದ ಧರಣಿ
Update: 2016-08-06 13:36 IST
ಕಾಸರಗೋಡು, ಆ.6: ಚಿಕಿತ್ಸೆಗೆ ಬಂದ ದಲಿತ ಮಹಿಳೆಯಿಂದ ವೈದ್ಯರು ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಕಾಸರಗೋಡು ಜನರಲ್ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ಪರ್ವ ಮುಂದುವರಿಯುತ್ತಿದೆ. ಶನಿವಾರ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ವತಿಯಿಂದ ಆಸ್ಪತ್ರೆಗೆ ಜಾಥಾ ನಡೆಸಿ ಧರಣಿ ನಡೆಸಲಾಯಿತು.
ಸಾಲಿಡಾರಿಟಿ ಜಿಲ್ಲಾಧ್ಯಕ್ಷ ಜಿಯಾಜುದ್ದೀನ್ ಇಬ್ನು ಹಂಝ ಧರಣಿಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಎನ್.ಎಂ. ರಿಯಾಝ್, ಅಬ್ದುಲ್ ಖಾದರ್ ಚಟ್ಟಂಚಾಲ್, ಎಸ್ಐಒ ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್, ರಾಝಿಕ್ ಮಂಜೇಶ್ವರ , ರಶೀದ್ ಮುಯುಹಿದ್ದೀನ್ , ಟಿ.ಎಂ. ಅಬ್ದುಸ್ಸಲಾಂ, ಆರ್.ಬಿ. ಮುಹಮ್ಮದ್ ಶಾಫಿ, ನೌಶಾದ್ ಕೂತುಪರಂಬ, ಅನೀಸ್ ರಹಮಾನ್, ಎಂ.ಕೆ.ಸಿ. ರಶೀದ್ ಮೊದಲಾದವರು ಉಪಸ್ಥಿತರಿದ್ದರು.