×
Ad

ಕಾಸರಗೋಡು: ಸ್ಪಿರಿಟ್ ಸಹಿತ ಆರೋಪಿ ವಶಕ್ಕೆ

Update: 2016-08-06 14:53 IST

ಸರಗೋಡು, ಆ.6: 20 ಲೀಟರ್ ಸ್ಪಿರಿಟ್ ಸಹಿತ ಯುವಕನೋರ್ವನನ್ನು ಅಬಕಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಬಂಧಿತನನ್ನು ಅಡೂರು ಮಾಟೆಯ ರಾಜೇಶ್ (24) ಎಂದು ಗುರುತಿಸಲಾಗಿದೆ. ಈತನಿಂದ 20 ಲೀ ಸ್ಪಿರಿಟ್, 2,850 ರೂ. ನಗದು, ಮೊಬೈಲ್ ಫೋನ್ ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿಯಂತೆ ಅಬಕಾರಿ ದಳದ ಸಿಬ್ಬಂದಿ ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಸ್ಪಿರಿಟ್ ಪತ್ತೆಯಾಗಿದೆ.

ಓಣಂ ಹಬ್ಬ ಸಮೀಪಿಸುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ತಯಾರಿ ಮತ್ತು ದಾಸ್ತಾನು ನಡೆಯುತ್ತಿದ್ದು , ಈ ಹಿನ್ನಲೆಯಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News