×
Ad

ಕಾಸರಗೋಡು: ರಸ್ತೆ ಅವ್ಯವಸ್ಥೆ ಖಂಡಿಸಿ ಬಿಜೆಪಿಯಿಂದ ಧರಣಿ

Update: 2016-08-06 15:13 IST

ಕಾಸರಗೋಡು, ಆ.6: ಕರಾವಳಿ ಪ್ರದೇಶದ ರಸ್ತೆಯ ಅವ್ಯವಸ್ಥೆಯನ್ನು ಪ್ರತಿಭಟಿಸಿ ಬಿಜೆಪಿ ಕಾಸರಗೋಡು ನಗರ ಸಮಿತಿ ವತಿಯಿಂದ ಶನಿವಾರ ಬೀಚ್ ರಸ್ತೆ ತಡೆ ನಡೆಸಿ ಧರಣಿ ನಡೆಸಲಾಯಿತು.

ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಧರಣಿ ನಡೆಸಿದರು. ಪ್ರತಿಭಟನೆಯನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕುಂಟಾರು ರವೀಶ ತಂತ್ರಿ ಉದ್ಘಾಟಿಸಿದರು.

ಸಮಿತಿ ಅಧ್ಯಕ್ಷ ಸತೀಶ್ ಅಣಂಗೂರು, ಮುಖಂಡರಾದ ಪಿ. ರಮೇಶ್, ರಾಮಪ್ಪ ಮಂಜೇಶ್ವರ, ಕೆ.ಟಿ. ಜಯರಾಂ, ಕೆ.ಜಿ. ಮನೋಹರನ್, ಪ್ರೇಮ, ಉಷಾ, ಉಮಾ, ಶ್ರೀಲತಾ , ದುಗ್ಗಪ್ಪ, ಸತೀಶ, ಶರತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News