×
Ad

ಕೊಕ್ರಝಾರ್‌ಗೆ ಎನ್‌ಐಎ ತಂಡ

Update: 2016-08-06 23:41 IST

ಕೊಕ್ರಝಾರ್(ಅಸ್ಸಾಂ), ಆ.6: ನಿನ್ನೆ 14 ಮಂದಿಯ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿ ನಡೆದಿದ್ದ ಸ್ಥಳವನ್ನು ರಾಷ್ಟ್ರೀಯ ತನಿಖೆ ಸಂಸ್ಥೆಯ(ಎನ್‌ಐಎ) ತಂಡವೊಂದು ಇಂದು ಪರಿಶೀಲನೆ ನಡೆಸಿದ್ದು, ಪ್ರಕರಣದ ಪ್ರತ್ಯಕ್ಷದರ್ಶಿಗಳೊಂದಿಗೆ ಮಾತುಕತೆ ನಡೆಸಿದೆ.
ಈ ದಾಳಿಗೆ ಕಾರಣವೆಂದು ಶಂಕಿಸಲಾಗಿರುವ ಬೋಡೊ ಪ್ರತ್ಯೇಕತಾವಾದಿ ಸಂಘಟನೆ ಎನ್‌ಡಿಬಿಎಫ್(ಎಸ್)ನ ಉಗ್ರರನ್ನು ಸೆರೆ ಹಿಡಿಯಲು ಭಾರೀ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ನಿನ್ನೆ ಭದ್ರತಾ ಪಡೆಗಳು ಕೊಂದಿದ್ದ ಉಗ್ರನನ್ನು ಮಂಜಯ್ ಇಸ್ಲಾರಿ ಎಂದು ಗುರುತಿಸಲಾಗಿದೆ. ಆತ ಎನ್‌ಡಿಎಫ್‌ಬಿ(ಎಸ್) ಗುಂಪಿನ 16ನೆ ಬೆಟಾಲಿಯನ್‌ನ ಸ್ವಯಂಘೋಷಿತ ಏರಿಯಾ ಕಮಾಂಡರ್ ಆಗಿದ್ದನು. ಆತನ ಶವವನ್ನು ಹೆತ್ತವರಿಗೆ ಒಪ್ಪಿಸಲಿದ್ದೇವೆಂದು ಅಸ್ಸಾಂನ ಅರ್ಥ ಸಚಿವ ಹಿಮಂತ ಬಿಸ್ವ ಶರ್ಮ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ತಿಳಿಸಿದ್ದಾರೆ.
ಬಲಜನ್ ತಿನಿಯಾಲಿ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ ನಡೆಸಿದ ಬಳಿಕ, ಪರಾರಿಯಾಗಿರುವ ಉಗ್ರರನ್ನು ಸೆರೆ ಹಿಡಿ ಯಲು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರ ಗೊಳಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ದಾಳಿ ನಡೆಸಿದ ಉಗ್ರರು ಯಾವುದೇ ಆತ್ಮಹತ್ಯಾ ದಳಕ್ಕೆ ಸೇರಿದವರಾಗಿರಲಿಲ್ಲ. ಹಾಗಿರುತ್ತಿದ್ದಲ್ಲಿ ಅವರು ಸ್ಥಳದಿಂದ ಪರಾರಿಯಾಗುತ್ತಿರಲಿಲ್ಲವೆಂದು ಶರ್ಮ ಅಭಿಪ್ರಾಯಿಸಿದ್ದಾರೆ.
ಎನ್‌ಐಎಯ ತಂಡವೊಂದು ಸ್ಥಳಕ್ಕೆ ತಲುಪಿದ್ದು, ಪ್ರತ್ಯಕ್ಷ ಸಾಕ್ಷಿಗಳೊಂದಿಗೆ ಮಾತನಾಡಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News